ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು ಉಡುಪಿ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡದ ಕರಾವಳಿ ಪ್ರದೇಶಗಳಿಗೆ ಹೆಚ್ಚಿನ ಅಲೆಗಳ ಎಚ್ಚರಿಕೆ ಮತ್ತು ಉಬ್ಬರದ ಅಲರ್ಟ್ ನೀಡಿದೆ.
ಉಡುಪಿಯಲ್ಲಿ ಎತ್ತರದ ಅಲೆಗಳು ಏಳುವ ಸಾಧ್ಯತೆ:
ಈ ಅಲೆಗಳ ಎಚ್ಚರಿಕೆ, ಅಲರ್ಟ್ ಜುಲೈ 19 ರಂದು ಸಂಜೆ 05 :30ರಿಂದ ಜುಲೈ 21 ರ ರಾತ್ರಿ 11.30 ರ ವರೆಗೆ ಜಾರಿಯಲ್ಲಿರುತ್ತದೆ ಹಾಗೂ ಉಡುಪಿ ಕರಾವಳಿಯ ಬೈಂದೂರಿನಿಂದ ಕಾಪುವರೆಗಿನ ಕರಾವಳಿಯಲ್ಲಿ 3.5 ರಿಂದ 3.7 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. 10.0 ರಿಂದ 12.0 ಸೆಕೆಂಡುಗಳ ಅವಧಿಯಲ್ಲಿ ಮತ್ತು 2.6 ರಿಂದ 2.8 ಮೀಟರ್ಗಳ ಎತ್ತರದಲ್ಲಿ ಭಾರೀ ಅಲೆಗಳು ಅಪ್ಪಳಿಸಲಿವೆ.
ಉ.ಕ.ದಲ್ಲಿ ಹೆಚ್ಚಿನ ಅಲೆಗಳ ನಿರೀಕ್ಷೆ:
ಉತ್ತರ ಕನ್ನಡದಲ್ಲಿ ಮಾಜಾಳಿಯಿಂದ ಭಟ್ಕಳದವರೆಗೆ ಹೆಚ್ಚಿನ ಅಲೆಯ ಎಚ್ಚರಿಕೆ ನೀಡಲಾಗಿದೆ. 3.8 ರಿಂದ 4.0 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಲೆಗಳನ್ನು ನಿರೀಕ್ಷಿಸಲಾಗಿದೆ. 10.0 ರಿಂದ 12.0 ಸೆಕೆಂಡುಗಳ ಅವಧಿಯಲ್ಲಿ ಮತ್ತು 2.9 ರಿಂದ 3.0 ಮೀಟರ್ಗಳ ಎತ್ತರದ ಅಲೆಗಳು ಅಪ್ಪಳಿಸಲಿವೆ.
ಸಣ್ಣ ಹಡಗುಗಳನ್ನು ನೀರಿಗೆ ಇಳಿಸಬಾರದು. ಹತ್ತಿರದ ಮನರಂಜನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಹಾಗೂ ಈ ವೇಳೆ ಕಡಲ್ಕೊರೆತ ಮತ್ತು ಭಾರೀ ಅಲೆಗಳು ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು INCOIS ಮಾಹಿತಿ ನೀಡಿದೆ.
ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಅಲೆಗಳ ಎಚ್ಚರಿಕೆ:
ದಕ್ಷಿಣ ಕನ್ನಡದಲ್ಲಿ ಮುಲ್ಕಿಯಿಂದ ಮಂಗಳೂರಿನವರೆಗೆ ಹೆಚ್ಚಿನ ಅಲೆಗಳ ಎಚ್ಚರಿಕೆ ನೀಡಲಾಗಿದ್ದು, 3.2 ರಿಂದ 3.4 ಮೀಟರ್ ವರೆಗೆ ಎತ್ತರದ ಅಲೆಗಳು ಬರುವ ನಿರೀಕ್ಷೆಯಿದೆ. 10.0 ರಿಂದ 12.0 ಸೆಕೆಂಡುಗಳ ಅವಧಿಯಲ್ಲಿ ಮತ್ತು 2.4 ರಿಂದ 2.5 ಮೀಟರ್ಗಳ ಎತ್ತರದಲ್ಲಿ ಅಲೆಗಳು ಅಪ್ಪಳಿಸಲಿವೆ. ಅಧಿಕಾರಿಗಳು ಸಮುದ್ರ ಕಾರ್ಯಾಚರಣೆಗಳು ನಡೆಸದಂತೆ, ಎಚ್ಚರಿಕೆಯಿಂದಿರಲು ಸಲಹೆ ನೀಡಿದ್ದಾರೆ.