ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿ ಕಪಿಲ ಮಹರ್ಷಿಯ ಸಾನಿಧ್ಯದಲ್ಲಿ ಪರಿವಾರ ಶಕ್ತಿಯಾಗಿ ಪ್ರತಿಷ್ಠಾಪನೆಗೊಂಡ ಶ್ರೀ ಪ್ರಸನ್ನಕ್ಷೆಯ ಶಿಲಾಬಿಂಬ ರಚಿಸಿ ಕೊಟ್ಟ ಮೈಸೂರಿನ ಕಲಾ ಕೃತಿ ಸಂಸ್ಥೆಯ ಶಿಲ್ಪಿ ಶಿವರಾಜ್ ಕುಮಾರ್ ಇವರನ್ನು ಕ್ಷೇತ್ರದ ಧರ್ಮದರ್ಶಿ, ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಗೌರವಿಸಿ ಸನ್ಮಾನಿಸಿದರು.. ಪ್ರತಿಷ್ಠೆಯ ನೇತೃತ್ವ ವಹಿಸಿದ ಶ್ರೀಯುತ ಗಣೇಶ್ ಸರಳಾಯ ಇವರನ್ನು ಗೌರವಿಸಲಾಯಿತು.. ಕ್ಷೇತ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ವೇದ ಮೂರ್ತಿ ಹೇರೂರು ಆನಂದ ಭಟ್ , ವೇದಮೂರ್ತಿ ಸೀತಾರಾಮ ಭಟ್ ಶ್ರೀಮತಿ ಉಷಾ ರಮಾನಂದ ಹಾಗೂ ಕ್ಷೇತ್ರದ ಅಸಂಖ್ಯಾತ ಭಕ್ತರುಗಳು ಉಪಸ್ಥಿತರಿದ್ದರು.