ಹೆಬ್ರಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಆಗುಂಬೆ ಹೆಬ್ರಿ ಸಂಪರ್ಕಿಸುವ ಸೀತಾನದಿ ಬಳಿ ನದಿ ಉಕ್ಕಿ ರಸ್ತೆಯ ಮೇಲೆ ಹರಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸೋಮವಾರ ರಾತ್ರಿ ನೀರು ಮೇಲೆರುತ್ತಿದ್ದಂತೆ ವಾಹನ ಸಂಚಾರ ಕಡಿಮೆಯಾಗುತ್ತಾ ಬಂದಿದ್ದು ನಂತರ ರಾತ್ರಿ ವಾಹನ ಸಂಚಾರ ಸಂಪೂರ್ಣ ನಿಷೇಧ ಮಾಡಲಾಗಿದೆ. ರಸ್ತೆಯ ಮೇಲ್ಭಾಗಕ್ಕೆ ಹರಿಯುತ್ತಿರುವ ನೀರು ಪಕ್ಕದ ಅಂಗಡಿ ಹೋಟೆಲ್ ಗಳ ಬಳಿ ತನಕ ಹರಿದು ಹಾಗೂ ಸುತ್ತಮುತ್ತಲಿನ ಪರಿಸರದ ತೋಟಗಳು ಜಲಾವೃತಗೊಂಡಿದೆ.
ಸೀತಾನದಿ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧ :
ಮಂಗಳಾರ ಬೆಳಿಗ್ಗೆಯಿಂದಲೂ ಕೂಡ ಬಾರಿ ಮಳೆ ಆಗುತ್ತಿದ್ದು ಸೀತಾನದಿ ನೀರಿನ ಮಟ್ಟ ಏರುತ್ತಿದ್ದು ಹೆಬ್ರಿ ಸೋಮೇಶ್ವರ ಮಾರ್ಗದಲ್ಲಿ ವಾಹನ ಸಂಚರಿಸಿದಂತೆ ಹಾಗೂ ಪರಿಯಾಯಮಾರ್ಗವಾಗಿ ಆಗುಂಬೆ ಹೋಗುವರು ಹೆಬ್ರಿಯಿಂದ ಮಾಂಡಿಮೂರ್ಕೈ, ಮಡಾಮಕ್ಕಿ ಸೋಮೇಶ್ವರ ಮೂಲಕ ತೆರಳುವಂತೆ ಹೆಬ್ರಿ ಪೊಲೀಸ್ ಠಾಣಾಧಿಕಾರಿ ಮಹೇಶ್ ಟಿ.ಅವರು ಸೂಚನೆ ನೀಡಿದ್ದಾರೆ.