ಅಲೆವೂರು ಮಾಧವ ಆಚಾರ್ಯರ ಸೊಬಗಿನ ಸ್ವೀಡನ್, ಬೆರಗಿನ ಪ್ರವಾಸ ಕೃತಿ ಲೋಕಾರ್ಪಣೆ

ಉಡುಪಿ: ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಡುಪಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯ ಅವರ ಸೊಬಗಿನ ಸ್ವೀಡನ್, ಬೆರಗಿನ ಪ್ರವಾಸ ಕೃತಿ ಲೋಕಾರ್ಪಣೆ ಗೊಂಡಿತು.

ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೇರಳ ಹೈಕೋರ್ಟಿನ ನ್ಯಾಯಮೂರ್ತಿ ಮುಶ್ತಾಕ್ ಮುಹಮ್ಮದ್ ಅವರು, ಒತ್ತಡರಹಿತವಾಗಿ ಬದುಕನ್ನು ಅನುಭವಿಸಿ ಸಂತಸಪಡಬೇಕು. ವೃತ್ತಿ, ಹಣ, ಸಂಪತ್ತು ಕೂಡಿಡುವ ಬದುಕಿನ ನಡುವೆ ದೇಶ ಸುತ್ತಬೇಕು. ಅನ್ಯ ಜನ, ದೇಶದ ಸಂಸ್ಕೃತಿ ಅರಿತು ಗೌರವಿಸಬೇಕು ಈ ಮೂಲಕ ಜ್ಞಾನ ಗಳಿಸಬೇಕು ಎಂದರು.

ಶಿಕ್ಷಣ ತಜ್ಞ ಪ್ರೊ.ಮಹಾಬಲೇಶ್ವರ ರಾವ್ ಕೃತಿ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಕಾನೂನು ಕಾಲೇಜಿನ ಲೀಗಸ್ ಸ್ಟಡೀಸ್‌ನ ನಿರ್ದೇಶಕಿ ಪ್ರೊ.ನಿರ್ಮಲಾ ಕುಮಾರಿ ಕೆ. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ರಘುನಾಥ್ ಕೆ.ಎಸ್., ಕೇರಳ ಹೈಕೋರ್ಟ್ ವಕೀಲ ರೋಯ್ ಜಾಕೋ ಮಾತನಾಡಿದರು.ಪ್ರತಿಭಾ ಮಾಧವ ಆಚಾರ್ಯ, ಅಲೆವೂರು ಸುಂದರ ಆಚಾರ್ಯ ಉಪಸ್ಥಿತರಿದ್ದರು. ಲೇಖಕ ಅಲೆವೂರು ಮಾಧವ ಆಚಾರ್ಯ ಸ್ವಾಗತಿಸಿದರು. ಅಮೋಘ ಗಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ರೋಹಿತ್ ಅಮೀನ್ ವಂದಿಸಿದರು.