ಮಳೆಗಾಲವು ಗಿಡ-ಮರಗಳಿಗೆ ಹೇಗೆ ಸುಗ್ಗಿಯೊ, ಹಾಗೇ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳಿಗೂ ಕೂಡ ಸುಗ್ಗಿ ಕಾಲ. ಇದೇ ಶಿಲೀಂದ್ರಗಳಿಂದಲೂ ಕೂಡ ನಮ್ಮ ಪಾದದಲ್ಲಿ ವಿಧ ವಿಧ ನಮೂನೆಯ ರೋಗಗಳು ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಮರೆಯದಿರಿ.
ವಾತಾವರಣದಲ್ಲಿ ತೇವ ಅಧಿಕವಿರುವುದರಿಂದ ಮಳೆಗಾಲದಲ್ಲಿ ಪಾದಗಳಲ್ಲಿ ತುರಿಕೆ ಹಾಗೂ ಅನೇಕ ಶಿಲೀಂಧ್ರಗಳ ಸೋಂಕು(fungal infection)ಕಾಡುವುದು ಅಧಿಕ. ಇಲ್ಲಿ ಪಾದಗಳನ್ನು ಹೇಗೆ ಆರೈಕೆ ಮಾಡಬೇಕು ಎನ್ನುವ ಕುರಿತು ಒಂದಷ್ಟು ಟಿಪ್ಸ್ ಗಳಿವೆ.
ಪಾದಗಳ ಆರೈಕೆ ಹೀಗಿರಲಿ
- ಪಾದಗಳನ್ನು ಸದಾ ಸ್ವಚ್ಛ ಹಾಗೂ ಶುಷ್ಕವಾಗಿಡಲು ಪ್ರಯತ್ನಿಸಿ. ನೀರಿನಿಂದ ತೊಳೆದ ನಂತರ ಸ್ವಚ್ಛ ಬಟ್ಟೆಯಿಂದ ಪಾದಗಳನ್ನು ಒರೆಸಿರಿ. ಸದಾ ನೀರಿಗೆ ಒಡ್ಡಿದರೆ ಸೋಂಕು ತಗಲುವ ಸಂಭವಿರುತ್ತದೆ.
- ಆರಾಮದಾಯಕ ಚಪ್ಪಲಿಗಳನ್ನೇ ಬಳಸಿ. ಪಾದಗಳನ್ನು ಮುಚ್ಚುವ ಶೂ ಅಥವಾ ಸಾಕ್ಸ್ ಗಳನ್ನು ಧರಿಸಬೇಡಿ , ಟೈಟ್ ಇರುವ ಶೂವನ್ನು ಧರಿಸಬೇಡಿ .ಅನಿವಾರ್ಯವಿದ್ದಲ್ಲಿ ಯಾವಾಗಲೂ ಶೂ ಹಾಗೂ ಸಾಕ್ಸ್ ಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿರಿ. ಪಾದಗಳಿಗೆ ಟಾಲ್ಕಮ್ ಪೌಡರ್ ಹಾಕಿ ಸಾಕ್ಸ್ ಅನ್ನು ಧರಿಸಿ. ಫ್ಲಿಪ್ ಫ್ಲಾಪ್ ಅಥವಾ ಸ್ಯಾಂಡಲ್ಸ್ ಧರಿಸಿದರೆ ಉತ್ತಮ.
- ಪ್ರತೀ ದಿನ ಪಾದಗಳನ್ನು ಪ್ಯೂಮಿಕ್ ಸ್ಟೋನ್( pumice stone) ಅಥವಾ ಫುಟ್ ಸ್ಕ್ರಬರ್( foot scrubber) ಬಳಸಿ ಉಜ್ಜಿ ತೊಳೆಯಿರಿ, ಇದರಿಂದ ಫುಟ್ ಟ್ರ್ಯಾಕ್ಸ್( foot crack) ಬರುವುದಿಲ್ಲ.
- ಪಾದಗಳ ಮಸಾಜ್ (foot massage) ಗೆ ಆಯುರ್ವೇದದಲ್ಲಿ ಪ್ರಾಮುಖ್ಯತೆ ಇದೆ. ಇದರಿಂದ ಆಗುವ ಲಾಭ ಏನ್ ಗೊತ್ತಾ? ರಕ್ತ ಪರಿಚಲನೆ ಉತ್ತಮಗೊಳಿಸಿ ನಮ್ಮ ನರಮಂಡಲವನ್ನು ಸುಸ್ಥಿತಿಯಲ್ಲಿ ಇಡಲು ಇದು ಸಹಕರಿಸುತ್ತದೆ. ದೋಷಗಳನ್ನು ಸಮತೋಲನದಲ್ಲಿಡುತ್ತದೆ. ಇನ್ಫೆಕ್ಷನ್ ತಡೆಯಲು ಬೇವಿನ ಎಣ್ಣೆಯಲ್ಲಿ ಪಾದಗಳ ಮಾಲಿಶ್ ಮಾಡಿ ಬಿಸಿ ನೀರಿನಿಂದ ತೊಳೆಯಿರಿ.
- ದಿನಕ್ಕೆ ಎರಡು ಬಾರಿ ಬಿಸಿಬಿಸಿ ಹರ್ಬಲ್ ಟೀ ಕುಡಿಯಿರಿ.
- ಡಯಾಬಿಟಿಸ್ ಇರುವವರು ತಮ್ಮ ಪಾದಗಳ ಬಗ್ಗೆ ವಿಶೇಷ ಗಮನ ಕೊಡಲೇಬೇಕು, ಯಾವುದೇ ತರಹದ ಇನ್ಫೆಕ್ಷನ್ , ಉರಿಯೂತ, ಗಾಯ ಕಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.