ಅಜೆಕಾರು: ನೂತನವಾಗಿ ಪ್ರಾರಂಭವಾದ ಅಜೆಕಾರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಜು14ರಂದು ಬೆಳಗ್ಗೆ 9.05ಕ್ಕೆ ‘ಶಾಲೋಮ್ ಪ್ರಗತಿ’ ಕಾಂಪ್ಲೆಕ್ಸ್ ಮುಖ್ಯ ರಸ್ತೆ, ಅಜೆಕಾರಿನಲ್ಲಿ ಶುಭಾರಂಭಗೊಳ್ಳುತ್ತಿದೆ.
ಈ ಉದ್ಘಾಟನ ಶುಭ ಸಂದರ್ಭದಲ್ಲಿ ನಿಟ್ಟೆ ಗಾಜ್ರಿಯ ಸ್ಪೆಷಾಲಿಟಿ ಹಾಸ್ಪಿಟಲ್ ಕಾರ್ಕಳ ಇವರಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಬೆಳಿಗ್ಗೆ ಗಂಟೆ 9-30 ರಿಂದ ಮಧ್ಯಾಹ್ನ 12-30ರ ವರೆಗೆ, ಅಜೆಕಾರು ಲಾಲೋಮ್ ಪ್ರಗತಿ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ನಡೆಸಲಾಗುವ ವೈದ್ಯಕೀಯ ತಪಾಸಣೆಗಳು:
◼️ಸಾಮಾನ್ಯ ವೈದ್ಯಕೀಯ ಸೇವೆ
◼️ಕಣ್ಣು ,ಕಿವಿ, ಮೂಗು ಚಿಕಿತ್ಸೆ
◼️ಚರ್ಮರೋಗ ಚಿಕಿತ್ಸೆ
◼️ರಕ್ತ ಪರೀಕ್ಷೆ
◼️ಎಲುಬು ರೋಗ ಚಿಕಿತ್ಸೆ
◼️ದಂತ ವೈದ್ಯಕೀಯ ಚಿಕಿತ್ಸೆ
ಈ ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಉಚಿತ ಔಷಧಿಯನ್ನು ವಿತರಿಸಲಾಗುವುದು.

ಸಹಕರಿಸುವ ಸಂಘಸಂಸ್ಥೆಗಳು:
ಪ್ರಾಥಮಿಕ ಆರೋಗ್ಯ ಕೇಂದ್ರ ಅಜೆಕಾರು, ಅಜೆಕಾರ್ ಮೆಡಿಕಲ್ಸ್ ಅಜೆಕಾರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಜೆಕಾರು, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಜೆಕಾರು ಹಾಗೂ ಲಯನ್ಸ್ ಕ್ಲಬ್ ಅಜೆಕಾರು.

ಈ ಶಿಬಿರದಲ್ಲಿ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳ ಕಟ್ಟೆ ಇವರಿಂದ ಪ್ರಾಯೋಜಿತ ‘ಕ್ಷೇಮ ಆರೋಗ್ಯ ವಿಮಾ ಯೋಜನೆ’ ಇದರ ನೋಂದಾವಣೆ ಮತ್ತು ಮಾಹಿತಿಯನ್ನು ನೀಡಲಾಗುವುದು. ದಾಖಲಾತಿಗೆ ಆಧಾರ ಕಾರ್ಡಿನ ಝೆರಾಕ್ಸ್ ಪ್ರತಿ, ಪಡಿತರ ಚೀಟಿ, ಸಣ್ಣ ಮಕ್ಕಳಾದರೆ ಜನನ ಪ್ರಮಾಣ ಪತ್ರ ಝೆರಾಕ್ಸ್ ಪ್ರತಿ ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












