ಕಲ್ಯಾಣಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹ ನವೆಂಬರ್ 28ರಿಂದ ಆರಂಭಗೊಂಡು ಡಿಸೆಂಬರ್ 5 ರವರೆಗೆ ನಡೆಯಲಿದ್ದು ಅಹೋರಾತ್ರಿ ಭಜನಾ ಕಾರ್ಯಕ್ರಮ ನೆರವೇರಲಿದೆ.
ನ.28 ಸೋಮವಾರದಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆಯ ಬಳಿಕ ದೀಪ ಪ್ರಜ್ವಲನೆಯೊಂದಿಗೆ ಭಜನಾ ಮಹೋತ್ಸವ ಆರಂಭಗೊಳ್ಳಲಿದೆ. ದೇವರಿಗೆ ವಿಶೇಷ ಹೂವಿನ ಅಲಂಕಾರ, ಪ್ರತಿದಿನ ರಾತ್ರಿ ಪೇಟೆ ಉತ್ಸವ ಜರುಗಲಿದೆ.
ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಆಹ್ವಾನಿತ ಅತಿಥಿ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮವಿರಲಿದೆ. ಸೋಮವಾರ ಗುರುದಾಸ್ ಚೂರ್ಯ ಮಂಗಳೂರು, ಮಂಗಳವಾರ ಪ್ರಸಾದ್ ಪ್ರಭು ಧಾರವಾಡ, ಬುಧವಾರ ದಯಾಕರ್ ಭಟ್ ಮಂಗಳೂರು, ಗುರುವಾರ ಐಶ್ವರ್ಯ ದೇಸಾಯಿ ಹುಬ್ಬಳ್ಳಿ, ಶುಕ್ರವಾರ ಓಂ ಬೋನ್ಗನ್ ಮುಂಬೈ, ಶನಿವಾರ ಬಾಲಚಂದ್ರ ಪ್ರಭು ಬೆಂಗಳೂರು,ಆದಿತ್ಯವಾರ ಸುಮಾ ಶಾಸ್ತ್ರೀ ಬೆಂಗಳೂರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಡಿ. 5ಸೋಮವಾರ ದಂದು ಭಜನಾ ಮಂಗಲೋತ್ಸವ ಸಂಪನ್ನಗೊಳ್ಳಲಿದೆ.