ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಪ್ರವೇಶಕ್ಕಾಗಿ ನಡೆಸುವ ನೀಟ್-2022ರ ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಜ್ಞಾನಸುಧಾ ಕಾಲೇಜಿನ 93 ವಿದ್ಯಾರ್ಥಿಗಳು ರಾಜ್ಯದ ವಿವಿಧ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ವೈದ್ಯಕೀಯ ರಂಗದ ಶೈಕ್ಷಣಿಕ ಕ್ಷೇತ್ರ ಎನಿಸಿಕೊಂಡ ಕರಾವಳಿ ಭಾಗದ ಕೆ.ಎಂ.ಸಿ ಮಂಗಳೂರು ಹಾಗೂ ಕೆ.ಎಂ.ಸಿ ಮಣಿಪಾಲ, ಬಿ.ಎಂ.ಸಿ.ಬೆಂಗಳೂರು, ಎಂ.ಎಂ.ಸಿ. ಮೈಸೂರ್, ಕಿಮ್ಸ್ ಹುಬ್ಬಳ್ಳಿ, ಸಿಮ್ಸ್ ಶಿವಮೊಗ್ಗ ಸಹಿತ ಕರ್ನಾಟಕದ ವಿವಿಧ ಮೆಡಿಕಲ್ ಕಾಲೇಜುಗಳಿಗೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 93 ವಿದ್ಯಾರ್ಥಿಗಳಲ್ಲಿ 59 ಬಾಲಕ ಹಾಗೂ 34 ಬಾಲಕಿಯರು ಮೊದಲ ಸುತ್ತಿನ ಪ್ರಕ್ರಿಯೆಯಲ್ಲೇ ತಮ್ಮ ವೈದ್ಯರಾಗುವ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಈ ಪೈಕಿ 7 ವಿದ್ಯಾರ್ಥಿಗಳು ಕರಾವಳಿಯ ಪ್ರತಿಷ್ಠಿತ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆದ ಹಿರಿಮೆಗೆ ಪಾತ್ರರಾಗಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದು, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.