ಉಡುಪಿ ಜ್ಞಾನಸುಧಾ ಪ.ಪೂ ಕಾಲೇಜಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಗುರಿ, ಯೋಜನೆ, ಸತತ ಪ್ರಯತ್ನ ಇವು ಸಾಧನೆಯ ಮೂಲ ಮಂತ್ರಗಳು. ಸ್ವಪ್ರೇರಣೆಯಿಂದ ಕಾರ್ಯೋನ್ಮುಖರಾದಾಗ ಕಾರ್ಯ ಯಶಸ್ವಿಯಾಗುವುದು. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಬೆಳಗಿಸಿಕೊಂಡು ತಮ್ಮ ಸಂತೋಷಕ್ಕೆ ಕಾರಣವಾಗಬೇಕು. ಆರೋಗ್ಯದ ಕುರಿತು ಕಾಳಜಿ ಅಗತ್ಯ. ನಾವೆಲ್ಲ ದಯಾಜೀವಿಗಳಾಗಿ ಬದುಕನ್ನು ಸಾರ್ಥಕ ಮಾಡಿಕೊಳ್ಳೋಣ ಎಂದು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ಅಸೋಸಿಯೇಟ್ ಪ್ರೊಫೆಸರ್ ಡಾ.ಶ್ರುತಿ ಆಚಾರ್ಯ ಅಭಿಪ್ರಾಯಪಟ್ಟರು.

ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಧನ ವಿತರಿಸಲಾಯಿತು.

ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್, ಉಪಪ್ರಾಂಶುಪಾಲ ಸಂತೋಷ್, ಉಪನ್ಯಾಸಕರು, ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು.

ಆಂಗ್ಲ ಭಾಷಾ ಉಪನ್ಯಾಸಕಿ ಕೀರ್ತಿ ಹರೀಶ್ ನಿರೂಪಿಸಿದರು.