71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಂಭ್ರಮ: ಆರ್ಥಿಕತೆಗೆ ಶಕ್ತಿ ಸಹಕಾರಿ ಸಂಘಗಳು – ರಾಘವೇಂದ್ರ ಕುಲಾಲ್

ಸಹಕಾರ ಸಂಘಗಳು ಭಾರತದ ಸಾಮಾಜಿಕ-ಆರ್ಥಿಕ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಸಮಾಜದ ವಿವಿಧ ವರ್ಗಗಳ ನಡುವೆ ಸಹಯೋಗವನ್ನು ಮತ್ತು ಸಬಲೀಕರಣವನ್ನು ಉತ್ತೇಜಿಸುತ್ತವೆ. ಈ ಸಮಾಜಗಳು ನಿಮ್ಮ ಸಮುದಾಯದ ಒಳಗೊಳ್ಳುವಿಕೆ ಮತ್ತು ಆ ಮೂಲಕ ಒಟ್ಟಾರೆ ಯೋಗಕ್ಷೇಮಕ್ಕಾಗಿ ಅಪಾರ ಸಾಮರ್ಥ್ಯವನ್ನು ಹೊಂದಿವೆ. 

ಇಂದಿನ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ಸಂಘಗಳು ಪ್ರಧಾನ  ಪಾತ್ರ ವಹಿಸುತ್ತಿವೆ. ಕಳೆದ ಶತಮಾನದ ಸಣ್ಣ  ಪ್ರಮಾಣದಲ್ಲಿ ಪ್ರಾರಂಭಗೊಂಡು  ಬೃಹತ್‌ ಪ್ರಮಾಣದ ಸಂಸ್ಥೆಗಳಾಗಿ ದೇಶಾದ್ಯಂತ  ನಮ್ಮ ನಿತ್ಯ ಜೀವನದ ಎಲ್ಲಾ ಸಾರ್ವಜನಿಕರ ಸ್ವಯಂ ಪ್ರೇರಿತ ಚಳುವಳಿಯಾಗಿದ್ದಾಗ್ಯೂ, ಸ್ವಾತಂತ್ರ್ಯ ನಂತರದ ಸಹಕಾರ ಚಳುವಳಿಯ ಬೆಳವಣಿಗೆಯಲ್ಲಿ  ʼರಾಜ್ಯಗಳೂʼ ಕೂಡ ಗಮನಾರ್ಹ ಪಾತ್ರ ವಹಿಸುತ್ತಿವೆ.

ಸಹಕಾರ ಸಂಘಗಳು ಇಂದು ರಾಷ್ಟ್ರೀಯ ಯೋಜನೆಗಳಲ್ಲಿ ಪಾಲ್ಗೊಳ್ಳುವುದರ ಹೊರತಾಗಿಯೂ ಹೊಸ 20 ಅಂಶಗಳ ಯೋಜನೆಯನ್ನು ಹಾಗೂ ದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ದುರ್ಬಲ ವರ್ಗದವರ ಏಳಿಗೆಗಾಗಿ ಸಹಕಾರ ಸಂಘಗಳು ಕ್ರಿಯಾಶೀಲ ಮತ್ತು ರಚನಾತ್ಮಕ ಪಾತ್ರ ವಹಿಸುತ್ತಿವೆ.

ಕೃಷಿ, ಪತ್ತು ಮಾರುಕಟ್ಟೆ, ಸಂಸ್ಕರಣ ಹಾಗೂ ಕೃಷಿ ಉತ್ಪನ್ನಗಳ ಶೇಖರಣೆ ಇತ್ಯಾದಿಗಳಂತಹ ನಾನಾ ವಿಧವಾದ ಕ್ಷೇತ್ರಗಳನ್ನೂ ಕೂಡ ಇದು ಆವರಿಸಿಕೊಂಡಿದೆ.

ವಿವಿಧ ಕ್ಷೇತ್ರಗಳಲ್ಲಿ ಸ್ಥಾಪಿತವಾಗಿರುವ ಸಹಕಾರ ಸಂಘಗಳೆಂದರೆ ಕೃಷಿ ಪತ್ತಿನ ಸಹಕಾರ ಸಂಘಗಳು, ಭೂ ಅಭಿವೃದ್ಧಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕುಗಳು, ಮಾರುಕಟ್ಟೆ ಹಾಗೂ ಸಂಸ್ಕರಣ ಸಂಗಗಳು, ಸಕ್ಕರೆ ಕಾರ್ಖಾನೆಗಳು, ನೂಲಿನ ಗಿರಣಿಗಳು, ಹಾಲು ಉತ್ಪಾದಕರ ಸಂಘಗಳು, ನೀರವಾವರಿ ಸಂಘಗಳು, ನೇಕಾರರ ಸಂಘಗಳು, ಕೈಗಾರಿಕಾ ಸಂಘಗಳು, ಬಳಕೆದಾರರ ಸಂಘಗಳು, ಕಾರ್ಮಿಕರ ಹಾಗೂ ಸಾಗಾಣೀಕೆ ಸಂಘಗಳು, ವಿದ್ಯುತ್‌  ಸಹಕಾರ ಸಂಘಗಳು, ಗೃಹ ನಿರ್ಮಾಣ, ಕೋಳಿ ಸಾಕಾಣಿಕೆ ಮತ್ತು ಮುದ್ರಣ ಸಹಕಾರ ಸಂಘಗಳೂ ಇತ್ಯಾದಿ, ಹೀಗೆ ನೂರಾರು ಬಗೆಯ ಸಹಕಾರ ಸಂಘಗಳು ಸ್ಥಾಪಿತಗೊಂಡು ಕಾರ್ಯನಿರ್ವಹಿಸುತ್ತಿವೆ..

-ರಾಘವೇಂದ್ರ ಕುಲಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಹೆಮ್ಮಾಡಿ