ಕಾಪು: ಸಮಾಜ ಸೇವಾ ವೇದಿಕೆ ವತಿಯಿಂದ ಪೊಲೀಸ್ ಠಾಣಾ ಕಟ್ಟಡದ ನವೀಕರಣಕ್ಕೆ 70 ಚೀಲ ಸಿಮೆಂಟ್ ನೆರವು

ಕಾಪು: ಇಲ್ಲಿನ ಸಮಾಜ ಸೇವಾ ವೇದಿಕೆ ವತಿಯಿಂದ ಕಾಪು ಪೊಲೀಸ್ ಠಾಣಾ ಕಟ್ಟಡದ ನವೀಕರಣಕ್ಕಾಗಿ, ಸ್ಲ್ಯಾಪ್ ನಿರ್ಮಾಣ ಮಾಡಲು ಸಿಮೆಂಟ್ ಅಗತ್ಯತೆಯನ್ನು ಮನಗಂಡ ಸಮಾಜ ಸೇವಾ ವೇದಿಕೆಯು, ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ 70 ಚೀಲ ಸಿಮೆಂಟ್ ನೀಡಿದೆ. ಸಿಮೆಂಟ್ ಚೀಲಗಳನ್ನು ಕಾಪು ಠಾಣಾಧಿಕಾರಿ ಪಿ.ಎಸ್.ಐ ಶ್ರೀ ಶೈಲ ಡಿ.ಎಂ ರವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶೈಲ, ಸಮಾಜ ಸೇವಾ ವೇದಿಕೆಯ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಕೋವಿಡ್ ಸಂದರ್ಭ ಕಷ್ಟದಲ್ಲಿದ್ದ ಕುಟುಂಬಕ್ಕೆ ಆಹಾರ ಪದಾರ್ಥಗಳು, ಮೆಡಿಕಲ್ ಕಿಟ್, ಮಾಸ್ಕ್ಸ್, ಗ್ಲೌಸ್, ಸಾನಿಟೈಜರ್ ನೀಡಿ ಸಹಕರಿಸಿದ್ದನ್ನು ಸ್ಮರಿಸಿದರು ಹಾಗೂ ವೇದಿಕೆಯ ಹತ್ತಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಿಂದ ಜನರಿಗೆ ಸಹಾಯವಾಗುತ್ತಿದೆ. ಕಾಪು ಪೊಲೀಸ್ ಠಾಣೆಯ ನವೀಕರಣಕ್ಕೆ 70 ಚೀಲ ಸಿಮೆಂಟ್ ನೀಡಿದ್ದು ಸಮಾಜದ ಬಗ್ಗೆ ಅವರಿಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಮುಂದೆಯೂ ಸಮಾಜಕ್ಕೆ ಇವರಿಂದ ಉತ್ತಮ ನೆರವು ಸಿಗುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕ್ರೈಂ ವಿಭಾಗದ ಪಿ.ಎಸ್.ಐ ಎಂ. ಭರತೇಶ್ ಕಂಕಣವಾಡಿ, ಸಮಾಜ ಸೇವಾ ವೇದಿಕೆ ಗೌರವಾಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಸಂಚಾಲಕ ದಿವಾಕರ ಡಿ ಶೆಟ್ಟಿ ಕಳತ್ತೂರು,ಕಾರ್ಯದರ್ಶಿ ಲೋಕೇಶ್ ಭಟ್ ಪಾದೂರು, ಸದಸ್ಯರುಗಳಾದ ಅಶೋಕ್ ಶೇರಿಗಾರ್ ಅಲೆವೂರು, ಹಸನ್ ಇಬ್ರಾಹಿಂ ಹೆಚ್. ಆರ್. ರೆಸಿಡೆನ್ಸಿ ಶಿರ್ವ, ಸಿ.ಆರ್.ಪ್ರಾಪರ್ಟಿಸ್, ಸಂತೋಷ್ ಆಚಾರ್ಯ ಶಿರ್ವ, ಸಾದಿಕ್ ಸಾಹಿಲ್ ಫೇಬ್ರಿಕೇಟರ್ಸ್ ಕಾಪು, ಸರ್ಫ್ರಾಜ್ ಎರ್ಮಾಳ್, ಗಣೇಶ್ ನಾಯ್ಕ್ ಪಯ್ಯಾರು, ಕಾಪು ಪೊಲೀಸ್ ಠಾಣಾ ಸಿಬ್ಬಂದಿಗಳು, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವೇದಿಕೆಯ ಗೌರವ ಸಲಹೆಗಾರ ದಯಾನಂದ ಕೆ ಶೆಟ್ಟಿ ದೆಂದೂರು ನಿರೂಪಿಸಿದರು.