ಜೆ.ಇ.ಇ ಅಡ್ವಾನ್ಸ್ಡ್‌ ಪರೀಕ್ಷೆ: ಕ್ರಿಯೇಟಿವ್‌ ಪದವಿ ಪೂರ್ವಕಾಲೇಜಿನ 7 ವಿದ್ಯಾರ್ಥಿಗಳು ತೇರ್ಗಡೆ

ಕಾರ್ಕಳ: ದೇಶದ ಪ್ರತಿಷ್ಠಿತ ಐ.ಐ.ಟಿ ಸಂಸ್ಥೆಯಲ್ಲಿ ಬಿ.ಇ (B.E) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ (JEE) ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಉದ್ಭವ್‌ ಎಂ ಆರ್‌, ಜಾಗೃತಿ ಕೆ ಪಿ, ಆದಿತ್ಯ ವಿ ಹೊಳ್ಳ, ಅಭಯ್‌ ಎಸ್‌ ಎಸ್‌, ಕಾರ್ತಿಕ್‌ ಕೃಷ್ಣಮೂರ್ತಿ ಹೆಗಡೆ, ಸೂರಜ್‌ ಕುಮಾರ್‌ ಎನ್‌, ಪ್ರಣವ್‌ ಪಿ ಸಂಜೀ ಉನ್ನತ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಅದರಲ್ಲಿ ಉದ್ಭವ್‌ ಎಂ ಆರ್‌ PREP-ST ಯಲ್ಲಿ 3 ನೇ ರ‍್ಯಾಂಕ್‌, ಜಾಗೃತಿ ಕೆ ಪಿ 24 ನೇ ರ‍್ಯಾಂಕ್‌ ಗಳಿಸಿ ವಿಶೇಷ ಸಾಧನೆ ಗೈದಿದ್ದಾರೆ.

ಪರೀಕ್ಷೆಗೆ ಕುಳಿತ ಕ್ರಿಯೇಟಿವ್‌ ನ ಕೇವಲ 12 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ದೇಶದ ಪ್ರತಿಷ್ಠಿತ 23 ಐಐಟಿ ಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ. ಸಂಸ್ಥೆಯ ಆರಂಭದ ವರ್ಷಗಳಲ್ಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಕಾಲೇಜು ಹೆಸರುವಾಸಿಯಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವರ್ಗದವರು, ಜೆಇಇ ಸಂಯೋಜಕರಾದ ನಂದೀಶ್ ಹೆಚ್‌ ಬಿ ಮತ್ತು ತಿರುಮಲ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.