ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯವು 2020ನೆ ಸಾಲಿನಲ್ಲಿ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಉಡುಪಿ ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು 6 ರ‍್ಯಾಂಕ್ ಮತ್ತು 2 ಚಿನ್ನದ ಪದಕಗಳನ್ನು ಗಳಿಸಿದೆ.
ಎಂ.ಎ ಇತಿಹಾಸ ವಿಭಾಗದಲ್ಲಿ ಸುಕನ್ಯ ಪ್ರಥಮ ರ‍್ಯಾಂಕ್ ಮತ್ತು 2 ಚಿನ್ನದ ಪದಕ, ಎಂ.ಕಾಂ ವಿಭಾಗದಲ್ಲಿ ಸುಚಿತ್ರ ಶೆಟ್ಟಿ 2ನೆ ರ‍್ಯಾಂಕ್, ಸ್ವಾತಿ 6ನೆ ರ‍್ಯಾಂಕ್, ಸಮಿತಾ ಆರ್. ದೇವಾಡಿಗ 8ನೆ ರ‍್ಯಾಂಕ್, ಶಿಲ್ಪಾ 8ನೆ ರ‍್ಯಾಂಕ್, ಪೂಜಾ 9ನೆ ರ‍್ಯಾಂಕ್ ಪಡೆದುಕೊಂಡಿದ್ದಾರೆ.