ಮಂಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆಯವರ ಸಲಹೆ ಸೂಚನೆಯ ಮೇರೆಗೆ ‘ಮನೆಯಂಗಳದಲ್ಲಿ ರಾಜ್ಯೋತ್ಸವ’ ಕಾರ್ಯಕ್ರಮವು ಶ್ರೀಮತಿ ರಾಧಿಕಾ ಶ್ರೀಧರ್ ರವರ ಅಡ್ಕರೆ ಪಡ್ಪುವಿನ ಪಂಜಿಲಪಾಲ್ ಮನೆಯಲ್ಲಿ ಜರುಗಿತು.
ವಿದ್ಯಾರ್ಥಿ ವಿದ್ಯಾರ್ಥಿನಿಯರು ನಾಡ ಗೀತೆಯನ್ನು ಹಾಡಿಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಪರಿಷತ್ತಿನ ಪದಾಧಿಕಾರಿ ಗುಣಾಜೆ ರಾಮಚಂದ್ರ ಭಟ್ ರಾಜ್ಯೋತ್ಸವದ ಮಹತ್ತ್ವದ ಬಗ್ಗೆ ಮಾತನಾಡಿ ‘ಕನ್ನಡಾಂಬೆಗೆ ನಮನ’ ಎಂಬ ಸ್ವರಚಿತ ಕವನವನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಹುಸೈನ್ ಬಿ.ಕೆ, ಪ್ರಸನ್ನ ಆಚಾರ್ಯ, ಸಾಯಿ ಚರಣ್,ಪಂಜಿಲ ಬಾಬು, ಸುಮತಿ,ಖತೀಜಮ್ಮ, ವಿದ್ಯಾರ್ಥಿಗಳಾದ ಸೃಜನ್,ನಿಶ್ವಿ ಡಿ. ಸಾಲಿಯಾನ್, ಆಯಿಶಾ ಅಮೀಮ, ಮರಿಯಮ್ಮ ಸಹ್ಲ, ಫಾತಿಮತ್ ರಿಯಾ, ಫಾತಿಮತ್ ಸಬಿಹ, ಆಯಿಶಾ ಸಂಶೀನ, ಫಾತಿಮತ್ ಸಪ್ನ, ಫಾತಿಮಾ ಹಝಿಮ ಮುಂತಾದವರು ಭಾಗವಹಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ರಾಜೀವ ಮಾಸ್ತರ್ ಹಾಗೂ ಪಂಜಿಲ ಪಾಲ್ ಮನೆಯವರು ಸಹಕರಿಸಿದರು
ಕ.ಸಾ.ಪರಿಷತ್ತಿನ ಗ್ರಾಮ ಪ್ರತಿನಿಧಿ ರಾಜೀವ ಮಾಸ್ತರ್ ಸ್ವಾಗತಿಸಿದರು. ಶ್ರೀಮತಿ ರಾಧಿಕಾ ಶ್ರೀಧರ್ ವಂದಿಸಿದರು.