ಜೆಇಇ ಮೈನ್ಸ್ ಪರೀಕ್ಷೆ: ಕುಂದಾಪುರ ಶ್ರೀ ವೆಂಕಟರಮಣ ಕಾಲೇಜಿನ 6 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಕೆ

ಕುಂದಾಪುರ: ರಾಷ್ಟ್ರ ಮಟ್ಟದಲ್ಲಿ ಜರುಗಿದ 2022 ನೇ ಸಾಲಿನ ಜೆಇಇ ಮೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ 6 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸೆಂಟೈಲ್ ದಾಖಲಿಸಿದ್ದಾರೆ.

ಕೀರ್ತನ್‌ಕಿಣಿ 95.75 ಪರ್ಸೆಂಟೈಲ್, ಮೊಗವೀರ್ ಸಾಹಿಲ್ ಶೇಖರ್ 93.63 ಪರ್ಸೆಂಟೈಲ್, ಅಮೋಘ ಕಾರಂತ್ 92.7 ಪರ್ಸೆಂಟೈಲ್ , ನಂದನ್ ಪೈ 91.26 ಪರ್ಸೆಂಟೈಲ್,ಪ್ರಣವ್.ಎಸ್.ಜೋಗಿ 91.12 ಪರ್ಸೆಂಟೈಲ್, ಕಾರ್ತಿಕ ಐತಾಳ್ 90.94 ಪರ್ಸೆಂಟೈಲ್‌ ಗಳಿಸಿದ್ದಾರೆ.

ಉತ್ತಮ ಫಲಿತಾಂಶ ಪಡೆದಿರುವ ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು , ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.