ಆಂಧ್ರ ಸಿಎಂ ರಿಲೀಫ್ ಫಂಡ್ ನಿಂದ 58 ಕೋಟಿ ರೂ. ದೋಚಲು ಯತ್ನ: ತುಳುಚಿತ್ರದ ನಿರ್ದೇಶಕ ಸಹಿತ ಆರು ಮಂದಿಯ ಬಂಧನ

ಮಂಗಳೂರು: ಆಂಧ್ರಪ್ರದೇಶದ ಸಿಎಂ ರಿಲೀಫ್​ ಫಂಡ್​ಗೆ ಕನ್ನ ಹಾಕಲು ಯತ್ನಿಸಿದ್ದ ಆರೋಪದಡಿ ತುಳು ಚಿತ್ರರಂಗದ​ ನಿರ್ದೇಶಕ ಉದಯ್ ಕುಮಾರ್ ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕತರ್ನಾಕ್ ಖದೀಮರ ತಂಡವು ಮೂಡುಬಿದಿರೆಯ ಬ್ಯಾಂಕ್ ವೊಂದರಲ್ಲಿ ನಕಲಿ ಚೆಕ್ ಮೂಲಕ 58 ಕೋಟಿ ರೂ. ವಿತ್​ ಡ್ರಾ ಮಾಡಲು ಮುಂದಾಗಿದ್ದರು. ಇಷ್ಟು ದೊಡ್ಡ ಮೊತ್ತವನ್ನು ಸಿಎಂ ರಿಲೀಫ್ ಫಂಡ್ ನಿಂದ ವಿಥ್ ಡ್ರಾ ಮಾಡುತ್ತಿರುವ ಬಗ್ಗೆ ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್ ಆಂಧ್ರ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ಈ ವೇಳೆ ಖದೀಮರ ಕೈಚಳಕ ಬಹಿರಂಗೊಂಡಿದೆ.

ಬ್ಯಾಂಕ್ ಮ್ಯಾನೇಜರ್ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದಲ್ಲಿ ತುಳು ಚಿತ್ರರಂಗದ ನಿರ್ದೇಶಕ ಉದಯ್ ಕುಮಾರ್, ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ನಿರ್ದೇಶಕ ಉದಯ್ ಶೆಟ್ಟಿ ಕಾಂತಾವರ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.