ಈ ವಿಶೇಷ ದಿನದಂದು ಧೋನಿಗೆ 42 ವರ್ಷ ತುಂಬಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಮಹಿ ಐಪಿಎಲ್ ನಲ್ಲಿ ಮಾತ್ರ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಭಾರತ ದೇಶವಲ್ಲದೇ ಇಡೀ ವಿಶ್ವದ ಕ್ರಿಕೆಟ್ ಲೋಕದ ಪ್ರೇಮಿಗಳ ಹೃದಯವನ್ನು ಆಳಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಾಳೆ ಜುಲೈ 7 ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.ಎಂಎಸ್ ಧೋನಿ ಹುಟ್ಟಹಬ್ಬಕ್ಕೂ ಮೊದಲೇ ಅಭಿಮಾನಿಗಳು ವಿಶೇಷ ಉಡುಗೊರೆ ನೀಡುತ್ತಿದ್ದಾರೆ.
ಹೌದು, ಧೋನಿ ಬ್ಲೂ ಜಿರ್ಸಿಯಲ್ಲಿ ಬ್ಯಾಟ್ ಹಿಡಿದು ಬರುತ್ತಿರುವ ಬರೋಬ್ಬರಿ 52 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದಾರೆ. ಇದೀಗ ಈ ಕಟೌಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೆಂಡ್ ಆಗಿದೆ. ಇದುವರೆಗೆ 12 ಲಕ್ಷಕ್ಕೂ ಹೆಚ್ಚು ಮಂದಿ ಧೋನಿಯ ಈ ಕಟೌಟ್ ಫೋಟೋವನ್ನು ಅಂತರ್ಜಾಲದಲ್ಲಿ ನೋಡಿದ್ದು, 8 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಲೈಕ್ ಮಾಡಿದ್ದಾರೆ. ಹಾಗು ನಿರಂತರವಾಗಿ ಈ ಫೋಟೋಗೆ ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳು ಧೋನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಹೀಗಿದ್ದರೂ ಧೋನಿ ಮೇಲಿನ ಕ್ರೇಜ್ ಅಭಿಮಾನಿಗಳಲ್ಲಿ ಇಂದಿಗೂ ಕಡಿಮೆಯಾಗಿಲ್ಲ. ಈ ಭಾರಿ ಧೋನಿ ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹವಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಹುಟ್ಟುಹಬ್ಬವನ್ನು ಆಚರಿಸಲು ಎಲ್ಲ ತಯಾರಿ ಆರಂಭಿಸಿದ್ದಾರೆ. ಈ ಮಧ್ಯೆ, ಹೈದರಾಬಾದ್ನಲ್ಲಿರುವ ಧೋನಿ ಅಭಿಮಾನಿಗಳು ಹುಟ್ಟುಹಬ್ಬಕ್ಕೂ ಮೊದಲು ಮುಂಗಡವಾಗಿ ವಿಶೇಷ ಉಡುಗೊರೆ ನೀಡಿ ಗೌರವಸಲ್ಲಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2023 ರ 16 ನೇ ಆವೃತ್ತಿಯ ಪ್ರಶಸ್ತಿಯನ್ನು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದಿದೆ. ಇದು ಸಿಎಸ್ಕೆ ತಂಡದ 5ನೇ ಟ್ರೋಫಿಯಾಗಿತ್ತು. ಈ ಆವೃತ್ತಿಯಲ್ಲಿ ಧೋನಿ ಯಾವ ಮೈದಾನಕ್ಕೆ ಹೋಗುತ್ತಾರೆ ಅಲ್ಲೆಲ್ಲ ಅಭಿಮಾನಿ ಹೋಗಿ ಬೆಂಬಲ ಕೊಡುತ್ತಿದ್ದರು. ಈ ಕ್ರೇಜ್ ಎಂದೆಂದಿಗೂ ಶಾಶ್ವತ ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು.
ಧೋನಿ ಟೀಂ ಇಂಡಿಯಾ ಪರ ಕ್ರಿಕೆಟ್ ಆಡುತ್ತಿರುವಾಗಲೂ ಸಹಾ ಅಭಿಮಾನಿಗಳಿಗೆ ಧೋನಿ ಎಂಬ ಕ್ರಿಕೆಟ್ ಹುಚ್ಚು ಹಿಡಿದಿತ್ತು ಎಂದರೇ ತಪ್ಪಲ್ಲ.
ಕಳೆದ ಬಾರಿ ಕೂಡ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಅಭಿಮಾನಿಗಳು ಧೋನಿಯ 41ನೇ ಜನ್ಮದಿನದ ಗೌರವಾರ್ಥವಾಗಿ 41 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದರು. ಈ ಕಟೌಟ್ ನಲ್ಲಿ ಧೋನಿ 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಐತಿಹಾಸಿಕ ಸಿಕ್ಸರ್ ಬಾರಿಸುವ ಮೂಲಕ ವಿಶ್ವಕಪ್ ಗೆಲ್ಲಿಸಿಕೊಟ್ಟ ಚಿತ್ರ ಹಾಕಲಾಗಿತ್ತು.
ಧೋನಿಯ ಈ 41 ಅಡಿ ಕಟೌಟ್ ಎಲ್ಲರ ಗಮನ ಸೆಳೆದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಕೇರಳದಲ್ಲಿ 2018 ರಲ್ಲಿ 35 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದರೆ, ಚೆನ್ನೈನಲ್ಲಿ 30 ಅಡಿ ಎತ್ತರದ ಕಟೌಟ್ ರೂಪಿಸಿದ್ದರು.