ಕಾರ್ಕಳ: ಇಂಡಿಯನ್ ಇನ್ಟಿಟ್ಯೂಟ್ ಆಫ್ ಸಾಯನ್ಸ್ ನಡೆಸುವ 2021 ನೇ ಸಾಲಿನ ರಾಷ್ಟ್ರಮಟ್ಟದ ಕೆವಿಪಿವೈ ಪರೀಕ್ಷೆ 22 ಮೇ 2022 ರಂದು ನಡೆದಿತ್ತು. ಶುಕ್ರವಾರದಂದು ಪ್ರಕಟವಾದ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾದ ಆರ್ಯ ಪಿ ಶೆಟ್ಟಿ, ಪ್ರಜ್ವಲ್ ಪಟ್‌ಗಾರ್, ಅಖಿಲ್ ಯು ವಾಗ್ಲೆ, ಆರ್ಯನ್ ವಿದ್ಯಾಧರ್ ಶೆಟ್ಟಿ, ಕಾರ್ತಿಕ್ ಬ್ಯಾಕುಡ್ ಜನರಲ್ ಮೆರಿಟ್ನಲ್ಲಿ ರ‍್ಯಾಂಕ್ ಪಡೆದಿರುತ್ತಾರೆ.
ರಾಷ್ಟ್ರಮಟ್ಟದಲ್ಲಿ ಪ್ರತಿ ವರ್ಷ ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು , ಅದರಲ್ಲಿ ಈ ಬಾರಿ 12 (SX) ನೇ ತರಗತಿ ವಿಭಾಗದಲ್ಲಿ ಕೇವಲ 1870 ವಿದ್ಯಾರ್ಥಿಗಳು ಅರ್ಹತೆ ಪಡೆದಿರುತ್ತಾರೆ.
ಕಳೆದ ವರ್ಷವೂ ಉಡುಪಿ ಜಿಲ್ಲೆಯಿಂದ ಮೂವರು ವಿದ್ಯಾರ್ಥಿಗಳು ಕೆವಿಪಿವೈ-SX(12) ತೇರ್ಗಡೆಯಾಗಿದ್ದು, ಆ ಮೂವರು ಜ್ಞಾನಸುಧಾದ ವಿದ್ಯಾರ್ಥಿಗಳು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ರಾಷ್ಟ್ರಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಯವರು ಅಭಿನಂದಿಸಿದ್ದಾರೆ.
ಕೆವಿಪಿವೈ ಫೆಲೋಶಿಪ್‌ಗಳನ್ನು ಭಾರತದಲ್ಲಿ ಅಧ್ಯಯನ ಮಾಡಲು ಭಾರತೀಯ ಪ್ರಜೆಗಳಿಗೆ ನೀಡಲಾಗುತ್ತದೆ. ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಧನಸಹಾಯ ಒದಗಿಸಲಾಗುತ್ತದೆ.