ಕುಂದಾಪುರ: ಪುರಸಭಾ ವ್ಯಾಪ್ತಿಯ ವಾಸ್ತವ್ಯ, ವಾಣಿಜ್ಯ ಕಟ್ಟಡ ಹಾಗೂ ಖಾಲಿ ನಿವೇಶನಗಳ ಮಾಲೀಕರು, 2023-24 ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ರೊಳಗೆ ಪಾವತಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
ಜೂನ್ 30ರ ವರೆಗೆ ದಂಡ ರಹಿತವಾಗಿ ಆಸ್ತಿ ತೆರಿಗೆ ಪಾವತಿಸಲು ಅವಕಾಶವಿದ್ದು, ಜುಲೈ 1 ರ ನಂತರ ಪಾವತಿಸಿದ್ದಲ್ಲಿ ತಿಂಗಳಿಗೆ ಶೇ.2 ರ ದಂಡವನ್ನು ವಿಧಿಸಲಾಗುವುದು ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.