ಮೈಚಾಂಗ್ ಚಂಡಮಾರುತದ ಅಬ್ಬರ: ಚೆನ್ನೈನಲ್ಲಿ ಕನಿಷ್ಠ 5 ಸಾವು; ಇಂದು ಆಂಧ್ರದತ್ತ ಪಯಣ

ಚೆನ್ನೈ: ಮೈಚಾಂಗ್ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಿಂದಾಗಿ ಹೆಚ್ಚಿನ ಭಾಗವು ಮುಳುಗಿದ್ದು ಜನಜೀವನ ಅಸ್ತವ್ಯಸ್ಥವಾಗಿದೆ. ಪ್ರಸ್ತುತ ಬಂಗಾಳ ಕೊಲ್ಲಿಯಲ್ಲಿರುವ ಚಂಡಮಾರುತವು ಆಂಧ್ರಪ್ರದೇಶ ಕರಾವಳಿಯತ್ತ ಸಾಗುವ ಸಾಧ್ಯತೆಯಿದೆ. ಚೆನ್ನೈನಲ್ಲಿ ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರವಾಹದ ವರದಿಯಾಗಿದ್ದು, ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳಿಗ್ಗೆವರೆಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಇಂದು ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಬೀಸುವ ಸಾಧ್ಯತೆ ಇದೆ.

ಚಂಡಮಾರುತದ ಪ್ರಭಾವದಿಂದಾಗಿ ತಗ್ಗು ಪ್ರದೇಶಗಳೆಲ್ಲಾ ನೀರಿನಲ್ಲಿ ಮುಳುಗಡೆಯಾಗಿದ್ದು, ನಿಲುಗಡೆ ಮಾಡಿದ್ದ ವಾಹನಗಳು ಪ್ರವಾಹದಲ್ಲಿ ಕೊಚ್ಚಿ ಹೋಗುವ ಘಟನೆಗಳು ನಡೆದಿವೆ. ನೀರಿನ ಮಟ್ಟ ಹೆಚ್ಚಿದ್ದರಿಂಡ ರಸ್ತೆಯಲ್ಲಿ ಮೊಸಳೆ ಓಡಾಡಿರುವ ದೃಶ್ಯಗಳೂ ಕಂಡು ಬಂದಿವೆ.

ಚೆನ್ನೈ ಹವಾಮಾನ ಕೇಂದ್ರವು ಮಂಗಳವಾರ ಬೆಳಗ್ಗೆ ತಮಿಳುನಾಡಿನ ಹತ್ತು ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಲಘು ಗುಡುಗು ಮತ್ತು ಸಿಡಿಲು ಮುನ್ಸೂಚನೆ ನೀಡಿದೆ.

ರಕ್ಷಣಾ ಕಾರ್ಯಕರ್ತರು ರಕ್ಷಣೆಯಲ್ಲಿ ನಿರತರಾಗಿದ್ದಾರೆ.