ದ್ವಿತೀಯ ಪಿಯುಸಿ ಫಲಿತಾಂಶ: ಕಾರ್ಕಳ ಜ್ಞಾನಸುಧಾ ವಿದ್ಯಾಸಂಸ್ಥೆಯ 453 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾರ್ಕಳ ಗಣಿತ ನಗರದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಒಟ್ಟು 552 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಗಳಿಸಿದ್ದು, 453 ವಿದ್ಯಾರ್ಥಿಗಳಿಗೆ  ಡಿಸ್ಟಿಂಕ್ಷನ್‍ ನಲ್ಲಿ ತೆರ್ಗಡೆಯಾಗಿದ್ದಾರೆ.

ಕಾಲೇಜಿನಲ್ಲಿ100ಕ್ಕೆ 100 ಅಂಕಗಳಿಸಿದ ಒಟ್ಟು ಪಠ್ಯಪತ್ರಿಕೆಯ ಸಂಖ್ಯೆ 860 ಆಗಿದ್ದು, ಗಣಿತದಲ್ಲಿ 164, ಕನ್ನಡದಲ್ಲಿ 120, ಭೌತಶಾಸ್ತ್ರದಲ್ಲಿ 110, ಜೀವಶಾಸ್ತ್ರದಲ್ಲಿ 105, ಇಂಗ್ಲಿಷ್‍ನಲ್ಲಿ 103, ರಸಾಯನ ಶಾಸ್ತ್ರದಲ್ಲಿ 98, ಸಂಸ್ಕಂತದಲ್ಲಿ 61, ಗಣಕವಿಜ್ಞಾನದಲ್ಲಿ 38, ಹಿಂದಿಯಲ್ಲಿ 31, ಸಂಖ್ಯಾಶಾಸ್ತ್ರದಲ್ಲಿ 11, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನಗಳಲ್ಲಿ ತಲಾ 7 ಮತ್ತು ಲೆಕ್ಕಶಾಸ್ತ್ರದಲ್ಲಿ 5 ವಿದ್ಯಾರ್ಥಿಗಳು100ಕ್ಕೆ 100 ಅಂಕ ಪಡೆದಿರುತ್ತಾರೆ.

ಉಡುಪಿ ಜಿಲ್ಲೆಯ 106 ಪದವಿಪೂರ್ವ ಕಾಲೇಜುಗಳಿದ್ದು, 600ಕ್ಕೆ 600 ಅಂಕ ಗಳಿಸಿದ 149 ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾದ 43 ವಿದ್ಯಾರ್ಥಿಗಳಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

600ಕ್ಕೆ 600 ಗಳಿಸಿದ ವಿದ್ಯಾರ್ಥಿಗಳು:
ವಿಜ್ಞಾನ ವಿಭಾಗ :
1. ಮನ್ವಿತ್ 2. ಅಭಯ್ ಕಾಮತ್
3.ಶ್ರೇಯಸ್ 4. ಶ್ರೀಹರಿ 5. .ಸುಕ್ಷಿತ್ 6. .ಪ್ರಸಾದ್ ಹೆಗ್ಡೆ 7.ಅವನೀಶ್ 8. ಶ್ರುತ
9. ಅರುಣ್, 10. ದೀಪಕ್ 11. ದರ್ಶನ್  12. ಅಭಿರಾಮ್ 13. ವರ್ಷಿತಾ 14. .ಪಾರ್ಥ 15. .ನಿಧಿ ಶೆಟ್ಟಿ,  16. .ಪ್ರಾಪ್ತಿ 17. ರೆಮಿತಾ  18. ಖುಷಿ 19. ರೆನಿಶಾ 20. ಸಿಂಚನಾ 21. ನೀರಜ್,   22. ಉನ್ನತ್  23. ಅರ್ಚಿತ 24. ದೃತಿ 25. .ಪ್ರಜ್ವಲ್ ಖೋಟ್
26. ಅಭೀಷೇಕ್ ಎಚ್ 27.ನೀತು 28. .ಸಂಕೀರ್ತ್ 29. ಕುಶಾಲ್ 30. .ವಿಯೋಲ,
31. .ಪ್ರಜ್ಞಾ 32. ಅಭಿಷೇಕ್ ವಿ ಎಲ್ 33. ಅನ್ವಿತಾ 34. ಅಪೇಕ್ಷಾ 35. ಮನು
36. .ವಿನುಷಾ 37. .ಭಾರ್ಗವ್, 38. .ನಿಶಾನ್, 39. .ಪ್ರಿಯಾ.

ವಾಣಿಜ್ಯ ವಿಭಾಗ :
40 .ದಶಾ ಕಾಮತ್
,41. .ಸುಮ 42.. .ಸೃಜನ್ 43. ಪಂಚಮಿ ಜೋಷಿ.