ಉಡುಪಿ: ಕಿದಿಯೂರು ಹೊಟೇಲ್ಸ್ ಪ್ರೈ.ಲಿ 38 ನೇ ವರ್ಷದ ವಾರ್ಷಿಕೋತ್ಸವ: ಇಂಟರ್ ನ್ಯಾಶನಲ್ ಸ್ಕೂಲ್ ಆರಂಭ; ಸಿಇಒ ಆಗಿ ಡಾ. ರಾಮದಾಸ್ ಪ್ರಭು ನೇಮಕ

ಉಡುಪಿ: ಎಲ್ಲರ ಸಹಕಾರದಿಂದ ನಿತ್ಯವೂ ಹೊಸ ಕೀರ್ತಿಮಾನ ಸ್ಥಾಪಿಸುತ್ತಿರುವ ಜಿಲ್ಲೆಯ ಸುಪ್ರಸಿದ್ದ ಕಿದಿಯೂರು ಹೊಟೇಲ್ಸ್ ಪ್ರೈ.ಲಿ ಎ. 30 ರಂದು ತನ್ನ 38 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದೆ.

ಕಿದಿಯೂರು ಹೊಟೇಲ್ಸ್ ಪ್ರೈ.ಲಿ ನ ಸೇವೆ ಹಾಗೂ ಸೌಲಭ್ಯಗಳು

ಅಪ್ಪಟ ಸಸ್ಯಾಹಾರಿ ಗೋಕುಲಕೃಷ್ಣ ಇಂಡಿಯನ್ ವೆಜಿಟೇರಿಯನ್ ಅರೋಮ
ಕಿದಿಯೂರು ಗಜೆಬೋ ಸ್ವಾದಿಷ್ಟ ಮಾಂಸಾಹಾರಿ ಹೊಟೇಲ್
ಕಿದಿಯೂರು ಕನ್ಫೆಕ್ಷನರಿ ಎಂಡ್ ಬೇಕರಿ ಕೇಕ್ ಮತ್ತು ಪೇಸ್ಟ್ರೀ ಶಾಪ್
ಹವಾನಿಯಂತ್ರಿತ ಲಕ್ಶುರಿ ಕೊಠಡಿಗಳು
ವರ್ಣ ಡಿಜಿಟಲ್ ಕಲರ್ ಲ್ಯಾಬ್
ವರ್ಣ ಡಿಜಿಟಲ್ ಪ್ಯಾರಡೈಸ್
ಕಿದಿಯೂರು ಝೋನ್ ಮೈಕೋ ಬ್ರಿವರಿ ಪಬ್
ಪಿಝಾ ಪ್ರಿಯರಿಗಾಗಿ ಕಿದಿಯೂರು ಪಿಝಾ

ಕಿದಿಯೂರು ಹೆರಿಟೇಜ್ ನಲ್ಲಿ ತಜ್ಞ ಮಹಿಳಾ ಆರೋಗ್ಯ ಪರಿಚಾರಕಿಯರಿಂದ ಗುಣಮಟ್ಟದ ಸೇವೆ, ಮಹಿಳೆಯರ ಎಲ್ಲಾ ರೀತಿಯ ಸೌಂದರ್ಯ ವರ್ಧಕ ಲಭ್ಯ.

ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಸರ್ವ ಸೌಲಭ್ಯಾಧಾರಿತ ಹವಾನಿಯಂತ್ರಿತ ಶೇಷಶಯನ ಹಾಲ್, ಮಾಧವಕೃಷ್ಣ ಹಾಲ್, ಅನಂತಶಯನ ಹಾಲ್, ಪವನ್ ರೂಫ್ ಟಾಪ್, ವಾಸುಕೀ ಶಯನ ಹಾಲ್ ಗಳು ಲಭ್ಯವಿವೆ.

ವಿಶಾಲವಾದ ಮೂರು ಮಹಡಿಗಳ ಹರಿದ್ವಾರ್ ಪಾರ್ಕಿಂಗ್ ಸೌಲಭ್ಯ.

ಹೋಮ್ ಡೆಲಿವರಿ

ಕಿದಿಯೂರು ಗಜೆಬೋದಲ್ಲಿ ಲಕ್ಶುರಿ ನಾನ್ ಆಲ್ಕೋಹಾಲಿಕ್ ಮತ್ತು ಮಲ್ಟಿ ಕ್ಯುಸೀನ್ ರೆಸ್ಟೋರೆಂಟ್ ವಿಭಾಗವನ್ನು ಪ್ರಾರಂಭಿಸಲಾಗಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಅಡುಗೆಗಳು ಬೆಳಿಗ್ಗೆ 11 ರಿಂದ ರಾತ್ರಿ 10.30 ರವರೆಗೂ ಹೋಂ ಡೆಲಿವರಿಯಲ್ಲಿ ಲಭ್ಯವಿದೆ.

ಇಂಟರ್ನ್ಯಾಶನಲ್ ಸ್ಕೂಲ್ ಆರಂಭ

ಉಡುಪಿಯ ನಿಟ್ಟೂರಿನಲ್ಲಿ ಕಿದಿಯೂರು ಹೊಟೇಲಿನ ಸಹಸಂಸ್ಥೆ ಸಂಪೂರ್ಣ ಹವಾನಿಯಂತ್ರಿತ ಕಿದಿಯೂರ್ಸ್ ಲಾರ್ಡ್ಸ್ ಇಂಟರ್ನ್ಯಾಶನಲ್ ಸ್ಕೂಲ್ ಇದೇ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಳ್ಳಲಿದೆ. 5 ರಿಂದ 12 ನೇ ತರಗತಿವರಗೆ ಇದ್ದು ಕೇಂದ್ರೀಯ ಪಠ್ಯಕ್ರಮ ಹೊಂದಿದೆ. ಪೂರ್ಣ ಸೌಕರ್ಯದೊಂದಿಗೆ ಉಡುಪಿಯಲ್ಲಿ ಸುಸಜ್ಜಿತವಾಗಿ ರೂಪುಗೊಳ್ಳಲಿದೆ ಎಂದು ಕಿದಿಯೂರು ಹೋಟೇಲಿನ ಆಡಳಿತ ನಿರ್ದೇಶಕ ಭುವನೆಂದ್ರ ಕಿದಿಯೂರು ತಿಳಿಸಿದ್ದಾರೆ.

ಸಿಇಒ ಆಗಿ ಡಾ. ರಾಮದಾಸ್ ಪ್ರಭು ಪಟ್ಲ ನೇಮಕ

ಕಿದಿಯೂರು ಹೊಟೇಲ್ಸ್ ಗ್ರೂಪ್ ಮ ಸಿಇಒ ಆಗಿ ಡಾ. ರಾಮದಾಸ್ ಪ್ರಭು ಪೆರ್ಣಂಕಿಲ ಪಟ್ಲ ಅವರನ್ನು ನೇಮಕ ಮಾಡಲಾಗಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗೋವಾ, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹೊಟೆಲು ಉದ್ಯಮ ಮತ್ತು ಪ್ರವಾಸೋದ್ಯಮದಲ್ಲಿ 25ಕ್ಕೂ ಹೆಚ್ಚಿನ ವರ್ಷದ ಅನುಭವ ಹೊಂದಿರುವ ಇವರು ಅದ್ಜಿಕಾರ ವಹಿಸಿ ಗುಣಮಟ್ಟದ ಸೇವೆಯ ಜೊತೆಗೆ ಸಂಸ್ಥೆಯನ್ನು ಇನ್ನಷ್ಟು ಉತ್ತುಂಗಕ್ಕೊಯ್ಯುವ ಭರವಸೆಯಲ್ಲಿದ್ದಾರೆ.