ನೌಕರರ ರಾಜ್ಯ ವಿಮಾ ನಿಗಮ: ನೌಕರರ ರಾಜ್ಯ ವಿಮಾ ನಿಗಮ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 3882 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇಲ್ದರ್ಜೆ ಕ್ಲರ್ಕ್ ,ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಸ್ಟೆನೋಗ್ರಾಫರ್ ಪೋಸ್ಟ್ಗಳು ಖಾಲಿ ಇವೆ. 10ನೇ ಮತ್ತು 12ನೇ ತರಗತಿ ಹಾಗೂ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹುದ್ದೆಯ ಮಾಹಿತಿ: ಮೇಲ್ದರ್ಜೆ ಕ್ಲರ್ಕ್ 1769, ಮಲ್ಟಿ ಟಾಸ್ಕಿಂಗ್ ಸ್ಟಾಫ್ 1948, ಸ್ಟೆನೋಗ್ರಾಫರ್ 165 ಹುದ್ದೆಗಳು
ವಿದ್ಯಾರ್ಹತೆ:
ನೌಕರರ ರಾಜ್ಯ ವಿಮಾ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ,ಮೇಲ್ದರ್ಜೆ ಕ್ಲರ್ಕ್ , ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್ನಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ ಹಾಗೂ ಪದವಿ ಪೂರ್ಣಗೊಳಿಸಿರಬೇಕು.
ಪ್ರಮುಖ ದಿನಾಂಕಗಳು:
ESIC ನೇಮಕಾತಿ 2022 ಅಧಿಸೂಚನೆ ಬಿಡುಗಡೆ ದಿನಾಂಕ 28ನೇ ಡಿಸೆಂಬರ್ 2021
ESIC ನೇಮಕಾತಿ 2022 ಆನ್ಲೈನ್ ಅಪ್ಲಿಕೇಶನ್ 15ನೇ ಜನವರಿ 2022 ರಿಂದ ಪ್ರಾರಂಭವಾಗುತ್ತದೆ.
ESIC ನೇಮಕಾತಿ 2022 ಆನ್ಲೈನ್ ಅಪ್ಲಿಕೇಶನ್ ಕೊನೆಯ ದಿನಾಂಕ 15 ಫೆಬ್ರವರಿ 2022
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 15ನೇ ಫೆಬ್ರವರಿ 2022
ESIC ಪ್ರವೇಶ ಕಾರ್ಡ್ ಲಭ್ಯ ದಿನಾಂಕ ಮಾರ್ಚ್ 2022
ESIC ಪರೀಕ್ಷೆಯ ದಿನಾಂಕ 2022 (ಹಂತ 1) 19ನೇ, 20ನೇ 26ನೇ ಮಾರ್ಚ್ 2022
ESIC ಪರೀಕ್ಷೆಯ ದಿನಾಂಕ 2022 (ಹಂತ 2) 30ನೇ ಏಪ್ರಿಲ್ 2022
ಅರ್ಜಿ ಶುಲ್ಕ:
ನೌಕರರ ರಾಜ್ಯ ವಿಮಾ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ,ಮೇಲ್ದರ್ಜೆ ಕ್ಲರ್ಕ್ , ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 500 ರೂ ಅರ್ಜಿ ಶುಲ್ಕ ಪಾವತಿಸಬೇಕು.
SC/ST/PW ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ವಯೋಮಿತಿ:
ಮೇಲ್ದರ್ಜೆ ಕ್ಲರ್ಕ್ – 18-27, ಮಲ್ಟಿ ಟಾಸ್ಕಿಂಗ್ ಸ್ಟಾಫ್- 18-25, ಸ್ಟೆನೋಗ್ರಾಫರ್- 18-27 ವಯೋಮಿಯನ್ನು ನಿಗದಿಪಡಿಸಲಾಗಿದೆ.
ವೇತನ:
ಮೇಲ್ದರ್ಜೆ ಕ್ಲರ್ಕ್ & ಸ್ಟೆನೋಗ್ರಾಫರ್ -ಮಾಸಿಕ ₹ 25,500-81,100
ಮಲ್ಟಿ ಟಾಸ್ಕಿಂಗ್ ಸ್ಟಾಫ್-ಮಾಸಿಕ ₹ 18,000-56,900
ಆಯ್ಕೆ ಪ್ರಕ್ರಿಯೆ:
ಮೇಲ್ದರ್ಜೆ ಕ್ಲರ್ಕ್ – ಪ್ರಿಲಿಮ್ಸ್, ಮೇನ್ಸ್, ಸ್ಕಿಲ್ ಟೆಸ್ಟ್ , ಮಲ್ಟಿ ಟಾಸ್ಕಿಂಗ್ ಸ್ಟಾಫ್- ಪ್ರಿಲಿಮ್ಸ್, ಮೇನ್ಸ್
ಸ್ಟೆನೋಗ್ರಾಫರ್ -ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್












