ಉಡುಪಿ: 2022ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪಟ್ಟಿ ಪ್ರಕಟವಾಗಿದೆ. ಪ್ರಶಸ್ತಿ ಪುರಸ್ಕೃತರ ಹೆಸರು ಈ ಕೆಳಕಂಡಂತಿದೆ.
ಕಾರ್ಕಳ ಹಿರ್ಗಾನದ ಲೋಕು ಪೂಜಾರಿ (ದೈವಾರಾಧನೆ), ಕುಂದಾಪುರ ಅಂಪಾರಿನ ನಾಗರಾಜ ಪಾಣ (ದೈವಾರಾಧನೆ), ಬೈಂದೂರು ಹೇರೂರಿನ ರಾಮಯ್ಯ ಬಳೆಗಾರ (ಯಕ್ಷಗಾನ), ಕಾಪು ಪಲಿಮಾರಿನ ಗಿರೀಶ್ (ಯಕ್ಷಗಾನ/ ರಂಗಭೂಮಿ), ಬ್ರಹ್ಮಾವರ ಬಾರಕೂರಿನ ಮನು ಹಂದಾಡಿ (ರಂಗಭೂಮಿ), ಕಾಪುವಿನ ರಾಜ ಕಟಪಾಡಿ (ರಂಗಭೂಮಿ), ಬೈಂದೂರು ಆಲೂರಿನ ಸುರೇಂದ್ರ ಮೊಗವೀರ (ಯಕ್ಷಗಾನ), ಬ್ರಹ್ಮಾವರ ಕೋಟ ಮಣೂರಿನ ಜಾನಕಿ ಹಂದೆ (ಕೃಷಿ/ ಹೈನುಗಾರಿಕೆ), ಕಾರ್ಕಳ ಸಾಂತೂರು ಕೊಪ್ಲದ ಬಾಬು ಕೆ.(ಸಾಹಿತ್ಯ), ಉಡುಪಿ ಅಂಬಲಪಾಡಿಯ ಕೆ.ಮಂಜಪ್ಪ ಸುವರ್ಣ(ಸಂಗೀತ), ಉಡುಪಿ ಸುಚಿತಾ ಪೈ (ಸಂಗೀತ), ಉಡುಪಿ 76 ಬಡಗಬೆಟ್ಟುವಿನ ನಾರಾಯಣ ಬಿಳಿರಾಯ (ಪಾಕತಜ್ಞರು), ಕಾಪು ಎಲ್ಲೂರಿನ ವೆಂಕಟೇಶ್ ದೇವಾಡಿಗ (ಪಾಕ ತಜ್ಞರು), ಕಾಪು ಪಡುಬಿದ್ರಿಯ ಎ.ರಾಮಚಂದ್ರ ಆಚಾರ್ಯ (ಮಾಧ್ಯಮ), ಕಾಪು ಮೂಡುಬೆಳ್ಳೆಯ ಮಹೇಶ ಮರ್ಣೆ (ಕಲೆ), ಕಾರ್ಕಳ ಎಣ್ಣೆಹೊಳೆಯ ಗಣೇಶ ನಾಯಕ್ ಯಾನೆ ವೈ ಪ್ರೆಮಾನಂದ ನಾಯಕ್ (ಕಲೆ), ಉಡುಪಿ ಮಣಿಪುರ ಗ್ರಾಮದ ಪ್ರೊ.ಕನರಾಡಿ ವಾದಿರಾಜ ಭಟ್(ಸಂಕೀರ್ಣ), ಉಡುಪಿ ದೊಡ್ಡಣಗುಡ್ಡೆಯ ಕಮಲಮ್ಮ(ಗೋಸಾಕಣೆ /ಕೃಷಿ ), ಉಡುಪಿ ಕನ್ನರ್ಪಾಡಿಯ ಡಾ.ಉಷಾ ಚಡಗ(ಸಂಕೀರ್ಣ), ಉಡುಪಿ ಕೆಳಾರ್ಕಳಬೆಟ್ಟುವಿನ ದಯಾ ನಂದ ಶೆಟ್ಟಿ(ಸಂಕೀರ್ಣ), ಕಾರ್ಕಳ ಹಿರಿಯಂಗಡಿಯ ಕೆ.ಸುಬ್ರಹ್ಮಣ್ಯ ಆಚಾರ್ಯ (ಸಂಕೀರ್ಣ), ಬ್ರಹ್ಮಾವರ ಮೂಡುಗಿಳಿಯಾರಿನ ರಾಘವೇಂದ್ರ ಶೆಟ್ಟಿ (ಜಾನಪದ), ಕಾಪು ಮಲ್ಲಾರಿನ ಹರೀಶ್ ಕುಮಾರ್ (ಜಾನಪದ), ಉಡುಪಿ ಈಶ್ವರ ಮಲ್ಪೆ (ಸಮಾಜ ಸೇವೆ), ಕಾರ್ಕಳ ಟಿ.ರಾಮಚಂದ್ರ ನಾಯಕ್ (ಸಮಾಜ ಸೇವೆ), ಹೆಬ್ರಿ ಕನ್ಯಾನದ ಐತು ಕುಲಾಲ್ (ಸಮಾಜ ಸೇವೆ), ಕುಂದಾಪುರ ವಡೇರಹೋಬಳಿಯ ಮಹಿಮಾ (ಬಾಲ ಪ್ರತಿಭೆ), ಉಡುಪಿ ಅಭಿನ್ ದೇವಾಡಿಗ (ಕ್ರೀಡೆ), ಉಡುಪಿ ಟೀಮ್ ನೇಷನ್ ಫಸ್ಟ್ (ಸಂಘ ಸಂಸ್ಥೆ), ಕಾರ್ಕಳ ಶ್ರೀಶಾರದ ಪೂಜಾ ಸಮಿತಿ (ಸಂಘ ಸಂಸ್ಥೆ), ಕುಂದಾಪುರ ಯಾಕುಬ್ ಗುಲ್ವಾಡಿ (ಸಾಹಿತ್ಯ), ಕಾರ್ಕಳ ಮುಂಡ್ಕೂರಿನ ಡಾ.ಸುನಿಲ್ (ವೈದ್ಯಕೀಯ), ಉಡುಪಿ ಕುತ್ಪಾಡಿಯ ಜೂಲಿಯನ್ ದಾಂತಿ (ಕೃಷಿ), ಕಾಪು ನೀಲಾಧರ ಶೇರಿಗಾರ (ಸಂಗೀತ), ಕಾಪು ಕಟಪಾಡಿಯ ಸುಲತಾ ಕಾಮತ್ (ಕ್ರೀಡೆ), ಉಡುಪಿ ಅರುಣಕಲಾ ಎಸ್.ರಾವ್(ಕ್ರೀಡೆ).
ವಿವಿಧ ಕ್ಷೇತ್ರಗಳ ಒಟ್ಟು 36 ಮಂದಿ ಸಾಧಕರು ಈ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.