ಕರ್ನಾಟಕ ಗೃಹಮಂಡಳಿ ನಿವಾಸಿಗಳ ಸಂಘದ 35 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ಉಡುಪಿ: ಕರ್ನಾಟಕ ಗೃಹಮಂಡಳಿ ನಿವಾಸಿಗಳ ಸಂಘ ದೊಡ್ಡಣಗುಡ್ಡೆ ಉಡುಪಿ ಇದರ 35 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಕಲ್ಪೋಕ್ತ ಪೂಜೆಯ ರಜತ ಮಹೋತ್ಸವ ಆದಿತ್ಯವಾರ ಸಂಜೆ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗಿತು.

ಸಾಮೂಹಿಕ ಸತ್ಯನಾರಾಯಣ ಕಲ್ಪೋಕ್ತ ಪೂಜೆಯ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಅರ್ಚಕ ವೃಂದದವರು ನಡೆಸಿಕೊಟ್ಟರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಘಟನೆಯಿಂದ ವ್ಯಕ್ತಿಯ ವಿಕಾಸ ಹಾಗೂ ಸಂಘದ ಐಕ್ಯತೆಗೆ ಸಾಮರಸ್ಯ ಶಕ್ತಿ ಬೆಳೆಯಲು ಪೂರಕವಾಗಿದ್ದು ಎಲ್ಲರೂ ಒಂದಾಗಿ ಧಾರ್ಮಿಕ ಸಾಮಾಜಿಕ ಚಟುವಟಿಕೆ ನಡೆಸುತ್ತಾ ಅಭಿವೃದ್ಧಿಯತ್ತ ಸಾಗಬೇಕೆಂದರು.

ಗೃಹಮಂಡಳಿ ನಿವಾಸಿಗಳ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಳೆದ 25 ವರ್ಷ ಸಂಘದ ಬೆಳವಣಿಗೆಗೆ ವಿಶೇಷ ಸೇವೆ ಸಲ್ಲಿಸಿದ ಸಂಘದ ಗೌರವ ಅಧ್ಯಕ್ಷಕುತ್ಪಾಡಿ ವಿಠಲ್ ಗಾಣಿಗ ದಂಪತಿಗಳನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಶಿಕ್ಷಣ ಇಲಾಖೆಯ ಅಶೋಕ್ ಕಾಮತ್, ನಗರಸಭೆಯ ಪೌರಾಯುಕ್ತ ರಾಯಪ್ಪ, ಬೆಂಗಳೂರಿನ ಕೆ.ಎಂ ಉಡುಪ ನೀಲಾವರ, ಸಂಘದ ಕಾರ್ಯದಶಿ ರಾಮ ಭಟ್ ಹಾಗೂ ಪಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘದ ನಿವಾಸಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.