ಮಣಿಪಾಲ: ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ ಕರಾವಳಿಯ ಅತಿದೊಡ್ಡ ಮಾರ್ಷಲ್ ಆರ್ಟ್ಸ್ ಸಂಸ್ಥೆಗಳಲ್ಲಿ ಒಂದಾಗಿದ್ದು, ರಾಜ್ಯದಲ್ಲಿ 200 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಉದಯೋನ್ಮುಖ ಕರಾಟೆ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಡೋಜೋ ಚಾಂಪಿಯನ್ ಶಿಪ್ ಅನ್ನು ಆಯೋಜಿಸುತ್ತಿದೆ. ಈ ಬಾರಿಯ 34 ನೇ ರಾಜ್ಯಮಟ್ಟದ ಇಂಟರ್ ಡೋಜೋ ಚಾಂಪಿಯನ್ ಶಿಪ್ ಡಿ.23 ಹಾಗೂ 24 ರಂದು ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ನಡೆಯಲಿದೆ.
ವಿವಿಧ ಭಾಗಗಳಿಂದ 1800 ಕ್ಕೂ ಹೆಚ್ಚು ಕ್ರೀಡಾ ಪಟುಗಳು ಹಾಗೂ 150 ಪರಿಣಿತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಯಶ್ ಪಾಲ್ ಸುವರ್ಣ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪಿ.ಶ್ರೀನಿವಾಸ್ ಉಪಾಧ್ಯಾಯ, ಪೆರ್ಣಂಕಿಲ ಶ್ರೀಶ ನಾಯಕ್, ಮಹೇಶ್ ಠಾಕೂರ್, ದಿನಕರ ಶೆಟ್ಟಿ ಹೆರ್ಗ, ಅಶೋಕ್ ಕಾಮತ್ ಕೊಡಂಗೆ, ದಿನೇಶ್ ಹೆಗ್ಡೆ ಅತ್ರಾಡಿ, ಡಾ. ಪಿ.ವಿ ಭಂಡಾರಿ, ಸುಮಿತ್ರಾ ಆರ್ ನಾಯಕ್, ದಿಲಿಪ್ ರಾಜ್ ಹೆಗ್ಡೆ, ಮಂಜುನಾಥ್ ಉಪಾಧ್ಯ, ಗಣೇಶ್ ಪಾಟೀಲ್, ಕೆ.ಪ್ರಕಾಶ್ ಶೆಣೈ, ಡಾ. ಲಾವಣ್ಯ ರಾವ್, ಸದಾನಂದ ನಾಯಕ್ ಹಾಗೂ ಡಾ. ವಿಷ್ಣುಮೂರ್ತಿ ಪ್ರಭು ವಹಿಸಲಿದ್ದಾರೆ.
ಬಿಕೆಐ ಗ್ರಾಂಡ್ ಮಾಸ್ಟರ್ ಸಿ.ಹನುಮಂತ ರಾವ್, ಐ.ಕೆ.ಎ.ಎ ಮುಖ್ಯ ತರಬೇತುದಾರ ಪ್ರವೀಣ್ ಕುಮಾರ್, ಐ.ಕೆ.ಎ.ಎ ಸಹಾಯಕ ತರಬೇತುದಾರ ಕೆ, ಆನಂದ್ ದೇವಾಡಿಗ, ಕಾರ್ಯಕ್ರಮದ ಸಂಘಟಕರು ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕ ರವಿಶಂಕರ್ ನಾಯಕ್ ತಿಳಿಸಿದ್ದಾರೆ.