ಶೀತದ ನಾಡಲ್ಲಿ 34 ಡಿಗ್ರಿ ಸೆಲ್ಸಿಯಸ್ ಶ್ರೀನಗರದಲ್ಲಿ ದಾಖಲೆಯ ತಾಪಮಾನ ದಾಖಲು​​​​​​​​​​​​​​​​​.. ಉತ್ತರ ಭಾರತದಲ್ಲಿ ಬಿಸಿಗಾಳಿಯ ಅಬ್ಬರ

ಶ್ರೀನಗರ( ಜಮ್ಮು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲೂ ಈ ಬಾರಿ ಬಿಸಿ ಗಾಳಿ ಅಬ್ಬರ ಜೋರಾದಂತೆ ಕಾಣುತ್ತಿದೆ. ಅತ್ತ ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ದಗೆ ಜಾಸ್ತಿ ಆಗುತ್ತಿದೆ. ಸದಾ ತಂಪನೆಯ ಹವಾಮಾನ ಇರುವ ಶ್ರೀನಗರದಲ್ಲಿ ಈ ಬಾರಿ ಇದೇ ಮೊದಲ ಬಾರಿಗೆ ಎಂಬಂತೆ ಈ ಋತುವಿನಲ್ಲಿ 34 ಡಿಗ್ರಿ ಸೆಲ್ಸಿಯಸ್​​​ಗೆ ತಾಪಮಾನ ಏರಿಕೆ ಆಗಿದೆ.
ಅದು ಹೊರತು ಪಡಿಸಿದರೆ ನಿನ್ನೆ ಅಂದರೆ 21 ಜೂನ್​​ 2023 ರಂದು 34 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ದಾಖಲಾಗಿದೆ.ಶ್ರೀನಗರದಲ್ಲಿ ಮೂರನೇ ಬಾರಿಗೆ 3ನೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. 1978 ರಲ್ಲಿ 37.8 ಸೆಲ್ಸಿಯಸ್​ ತಾಪಮಾನ ದಾಖಲಾಗಿತ್ತು. ಇದು ಇದುವರೆಗಿನ ಅತ್ಯಂತ ಹೆಚ್ಚು ತಾಪಮಾನ, ಅದು ಬಿಟ್ಟರೆ 2018 ರಲ್ಲಿ 35 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾದ ವರದಿಯಾಗಿತ್ತು.

 

ಅಷ್ಟೇ ಕಣಿವೆ ರಾಜ್ಯದ ರಾಜಧಾನಿಯಲ್ಲಿ ಬಿಸಿ ಮತ್ತು ಶುಷ್ಕ ವಾತಾವರಣ ಮುಂದುವರೆದಿದೆ. ಶ್ರೀನಗರದಲ್ಲಿ ಋತುವಿನ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಗುರುವಾರ ದೃಢಪಡಿಸಿದೆ. ಈ ವಿಚಾರ ಜಮ್ಮು ಕಾಶ್ಮೀರದ ಜನರದ ಜನರ ನಿದ್ದೆಗೆಡುವಂತೆ ಮಾಡಿದೆ.
.

ಇದು ಜಮ್ಮು- ಕಾಶ್ಮೀರದ ಕಥೆಯಾದರೆ, ಇನ್ನು ಉತ್ತರಪ್ರದೇಶದಲ್ಲಿ ಬಿಸಿಗಾಳಿಯಿಂದ ಬಳಲಿ, ನಾನಾ ರೋಗಗಳಿಗೆ ತುತ್ತಾಗಿರುವ ಜನ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದುವರೆಗೂ ಉತ್ತರದ ರಾಜ್ಯಗಳಲ್ಲಿ ಬಿಸಿಲಿನ ಝಳಕ್ಕೆ ಬಲಿಯಾದವರ ಸಂಖ್ಯೆ 100 ಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಮಂಗಳವಾರ ಉತ್ತರ ಪ್ರದೇಶದಲ್ಲಿ ಒಂದೇ ದಿನ 12 ಜನ ಪ್ರಾಣ ಕಳೆದುಕೊಂಡಿದ್ದರು. ಇನ್ನು ನಿನ್ನೆ ಅತಿಸಾರದಿಂದಾಗಿ ಗೋರಖ್​ಪುರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆಸ್ಪತ್ರೆ ಮೂಲಗಳು ತಿಳಿಸಿವೆ.

” ಶ್ರೀನಗರದಲ್ಲಿ ನಿನ್ನೆ (ಬುಧವಾರ) ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದೆ, ಇದು ಇದುವರೆಗಿನ ಋತುವಿನ ಅತ್ಯಧಿಕ ತಾಪಮಾನವಾಗಿದೆ. ಶ್ರೀನಗರದಲ್ಲಿ ಈ ಹಿಂದೆ ಅಂದರೆ ಜೂನ್ 3, 2018 ರಂದು 35 ಡಿಗ್ರಿ ಸೆಲ್ಸಿಯಸ್​ ದಾಖಲಾಗಿತ್ತು” ಇದು ಇದುವರೆಗಿನ 2ನೇ ಗರಿಷ್ಠ ತಾಪಮಾನ ಎಂದು ದಾಖಲಾಗಿದೆ” ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ಪ್ರಕಾರ ಜೂನ್ 29, 1978 ರಂದು ಶ್ರೀನಗರದಲ್ಲಿ ಸಾರ್ವಕಾಲಿಕ ದಾಖಲೆಯ ಗರಿಷ್ಠ ತಾಪಮಾನ 37.8 ಡಿಗ್ರಿ ದಾಖಲಾಗಿತ್ತು.

ಏತನ್ಮಧ್ಯೆ ಶ್ರೀನಗರದಲ್ಲಿ 20.5, ಪಹಲ್ಗಾಮ್ 11.3 ಮತ್ತು ಗುಲ್ಮಾರ್ಗ್ 13.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದ ವರದಿಯಾಗಿದೆ. ಲಡಾಖ್ ಪ್ರದೇಶದಲ್ಲಿ, ಕಾರ್ಗಿಲ್​​ನಲ್ಲಿ 13, ಲೇಹ್ 5.2 ಡಿಗ್ರಿ ಸೆಲ್ಸಿಯಸ್, ಜಮ್ಮುದಲ್ಲಿ 27.8, ಕತ್ರಾ 27.2, ಬಟೋಟೆ 21.1, ಬನಿಹಾಲ್ 19.8 ಮತ್ತು ಭದೇರ್ವಾಹ್ 20 ಡಿಗ್ರಿ ಸೆಲ್ಸಿಯಸ್​ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ