ಬೊರಿವಲಿ: ಶ್ರೀ ಕ್ಷೇತ್ರ ಮಹಿಷಮರ್ದಿನಿ ದೇವಸ್ಥಾನದ 33ನೇ ಪೂಜಾ ಮಹೋತ್ಸವ ದೈವಾರಾಧನೆ ನೇಮೋತ್ಸವ ಜೂ. 4ರಂದು ಜರುಗಿತು.
ಧಾರ್ಮಿಕ ತಳಹದಿ ಭದ್ರಗೊಂಡಾಗ ದೇವಾಲಯಗಳ ಸಾನಿಧ್ಯ ಚೈತನ್ಯ ವೃದ್ಧಿಗೊಳ್ಳುವುದು. ಜೊತೆಗೆ ಊರು ಪರಿಸರ ಸುಭಿಕ್ಷೆಗೊಳ್ಳುವುದು. 12 ವರ್ಷಕ್ಕೊಮ್ಮೆ ಬ್ರಹ್ಮಕಲಶ ನೆರವೇರಿಸುವ ಸಂಕಲ್ಪದೊಂದಿಗೆ ಸಮಸ್ತ ತುಳು ಕನ್ನಡಿಗರ ಶ್ರೇಯೋಭಿವೃದ್ಧಿ, ಕಳೆದ ಕಾಲಾವಧಿಯಲ್ಲಿ ಜಗತ್ತನ್ನೇ ತಲ್ಲಣ ಗೊಳಿಸಿದ ಸಾಂಕ್ರಾಮಿಕದಂತಹ ರೋಗಗಳಿಂದ ದೂರವಾಗಿರಿಸುವ ಉದ್ದೇಶದಿಂದ ಪ್ರಸಕ್ತ ವರ್ಷ ದೇವಸ್ಥಾನದ ಸರ್ವಭಕ್ತರ ಆಶಯದೊಂದಿಗೆ ಊರಿನ ಕೋಲದ ತಂಡದೊಂದಿಗೆ ನೇಮೋತ್ಸವ ಜರಗಿದೆ. ದೈವಾರಾಧನೆ ಹಿರಿಯರ ಕಟ್ಟುಕಟ್ಟಲೆಗಳು ಆಚಾರ ವಿಚಾರಗಳ ಮೂಲಕ ನಮ್ಮ ಪರಂಪರೆಯ ಸಂಪ್ರದಾಯದಲ್ಲಿ ಮುಂದುವರಿಯಬೇಕು. ಶ್ರೀ ಗಣಪತಿ ಶ್ರೀ ಮುಖ್ಯಪ್ರಾಣ ವಾಸುಕಿ ನಾಗರಾಜ ನವಗ್ರಹ ರಕ್ತೇಶ್ವರಿ ಧರ್ಮದೈವ ಕೊಡಮಣಿತ್ತಾಯ ಸಾನಿಧ್ಯದಲ್ಲಿ ದೈನಂದಿನ ದೇವತಾರಾಧನೆ ಸೇವೆ ಈ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ ಶೆಟ್ಟಿ ಹೇಳಿದರು.
ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸ್ಥಾಪಕ ವಂಶಸ್ಥ ಮೊಕ್ತೇಸರ ಕಲ್ಲಮುಂಡ್ಕೂರು ಹರಿಯಾಳಗುತ್ತು ಜಯರಾಜ್ ಶ್ರೀಧರ ಶೆಟ್ಟಿ ದಂಪತಿಗಳು, ಶಾಲಿನಿ ಪ್ರದೀಪ್ ಶೆಟ್ಟಿ, ಅಮೃತಾ ಜೆ ಶೆಟ್ಟಿ , ಮೊಕ್ತೇಸರಅಶೋಕ್ ಜಯಪಾಲಿ ಶೆಟ್ಟಿ, ಜಯಂತ್ ಶೆಟ್ಟಿ, ಉದ್ಯಮಿ, ಬಾಲಕೃಷ್ಣ ರೈ, ವಿರಾರ್ ಶಂಕರ್ ಶೆಟ್ಟಿ, ಬಂಟರ ಸಂಘದ ಜತೆ ಕೋಶಾಧಿಕಾರಿ ಮುಂಡಪ್ಪ ಎಸ್ ಪಯ್ಯಡೆ, ಬಂಟರ ಸಂಘ ಜೊಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಿಟ್ಟೆ ಮುದ್ದಣ್ಣ ಜಿ ಶೆಟ್ಟಿ, ವಿಜಯ ಆರ್ ಭಂಡಾರಿ, ಎರ್ಮಾಳು ಹರೀಶ್ ಶೆಟ್ಟಿ, ಪ್ರೇಮ್ ಶೆಟ್ಟಿ, ಬಿಲ್ಡರ್ ಗೋಪಾಲ ಶೆಟ್ಟಿ ದಂಪತಿಗಳು, ಧರ್ಮ ದೈವ ನೇಮೋತ್ಸವಕ್ಕೆ ಸ್ಥಳವಾಕಾಶ ಒದಗಿಸಿದ ಶೇಖರ್ ರಾವ್ ಮೀರಾ ಭಾಯಂಧರ್, ನಗರ ಸೇವಕ ಅರವಿಂದ್ ಶೆಟ್ಟಿ ಗುರುದೇವ ಸೇವಾ ಬಳಗ ಮುಂಬಯಿ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಮಾನವಸೇವಾ ಸಂಘ ಮಹಾರಾಷ್ಟ್ರ ಅಧ್ಯಕ್ಷ ಡಾ. ಹರೀಶ್ ಶೆಟ್ಟಿ, ಡಾ. ಸತೀಶ್ ಶೆಟ್ಟಿ, ದಿನೇಶ್ ಕಶ್ಯಪ್ ಬೊರಿವಲಿ, ಥಾಣಾ ಎಸಿಪಿ ಸುಧೀರ್ ಖಾಲೇಕರ್ ಸ್ಥಳೀಯ ಮಾಜಿ ನಗರ ಸೇವಕರು, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ವೈದಿಕ ತತ್ವದಡಿ ಬೆಳ್ಮಣ್ಣು ವೆಂಕಟರಮಣ ತಂತ್ರಿ ,ಬ್ರಹ್ಮಶ್ರೀ ಕೊಯ್ಯೂರು ನಂದ ಕುಮಾರ ತಂತ್ರಿ, ಅಶೋಕ್ ಭಟ್ ಕೊಯ್ಯೂರು ಕುಟುಂಬಸ್ಥರು, ದೇವರಾಜ ನೆಲ್ಲಿ, ದೈವ ಪಾತ್ರಿ ಸುನಿಲ್ ಶೆಟ್ಟಿ ,ದೇಜಪ್ಪ ತಂಡದವರು, ವಾಲಗದಲ್ಲಿ ಹರೀಶ್ ದೇವಾಡಿಗ ಕೊಯ್ಯೂರು ತಂಡದವರು ಸಹಕರಿಸಿದರು.
ಶ್ರೀ ಮಹಿಷಮರ್ದಿನಿ ದೇವಾಸ್ಥನದ ಆಡಳಿತ ಮಂಡಳಿ, ಅರ್ಚಕ ವೃಂದ ಭಜನ ಮಂಡಳಿ ಸದಸ್ಯರು ಸಹಕರಿಸಿದರು. ಸ್ಥಳೀಯ ರಾಜಕೀಯ ನೇತಾರರು, ಸ್ಥಳೀಯ ವಿವಿಧ ಸಂಘಸಂಸ್ಥೆಗಳ ಪಧಾಧಿಕಾರಿಗಳು, ಉದ್ಯಮಿಗಳು ತುಳುಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಧರ್ಮದೈವ ನೇಮೋತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ, ವರದಿ: ರಮೇಶ್ ಉದ್ಯಾವರ್