ಬೆಂಗಳೂರು: ಶಿಯೋಮಿ ಇಂಡಿಯಾದ ರೆಡ್ಮಿ-12 (Redmi 12 Series) ಸಿರೀಸ್ ಲಾಂಚ್ ಆದ ಮೊದಲ ದಿನವೇ 3 ಲಕ್ಷಕ್ಕೂ ಅಧಿಕ ರೆಡ್ಮಿ12 5ಜಿ ಸ್ಮಾರ್ಟ್ಫೋನ್ಗಳು ಮಾರಾಟವಾಗಿದ್ದು ದಾಖಲೆಯಾಗಿದೆ. ರೆಡ್ಮಿ-12 5ಜಿ ಮತ್ತು ರೆಡ್ಮಿ 12 ಎಂಬ ಎರಡು ಸ್ಮಾರ್ಟ್ಫೋನ್ಗಳನ್ನು ಒಳಗೊಂಡಿರುವ ರೆಡ್ಮಿ-12 ಸರಣಿಯು ಈ ವಾರದ ಆರಂಭದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಾಗಿನಿಂದ ತಜ್ಞರು ಮತ್ತು ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ5ಜಿ ಯುಗದತ್ತ ಪರಿವರ್ತನೆಯ ಹಾದಿಯಲ್ಲಿ ಶಿಯೋಮಿ ಇಂಡಿಯಾ ಮಹತ್ತರ ಸಾಧನೆ ಮಾಡಿದೆ.ಶಿಯೋಮಿ ರೆಡ್ಮಿ-12 ಸಿರೀಸ್ ಸ್ಮಾರ್ಟ್ಫೋನ್ಗಳು ಭಾರತದ ಮಾರುಕಟ್ಟೆಯಲ್ಲಿ ಅತ್ಯಧಿಕವಾಗಿ ಮಾರಾಟವಾಗುತ್ತಿವೆ. ಲಾಂಚ್ ಆದ ಮೊದಲ ದಿನವೇ 3 ಲಕ್ಷ ಫೋನ್ಗಳು ಮಾರಾಟವಾಗಿವೆ
ರೆಡ್ಮಿ-12 5 ಜಿ ಇದು 4ನೇ ಜೆನ್ ಸ್ನ್ಯಾಪ್ಡ್ರ್ಯಾಗನ್-2 5 ಜಿ ಪ್ರೊಸೆಸರ್ ಹೊಂದಿರುವ ಭಾರತದ ಮೊದಲ ಸ್ಮಾರ್ಟ್ ಫೋನ್ ಆಗಿದೆ. ಇದು ಉತ್ಕೃಷ್ಟ ಮಟ್ಟದ 4 ಎನ್ಎಂ ಆರ್ಕಿಟೆಕ್ಚರ್ ಅನ್ನು ಒಳಗೊಂಡಿದೆ. ವೇಗದ ಸಂಪರ್ಕಕ್ಕಾಗಿ ಪರಿಣಾಮಕಾರಿ 5 ಜಿ ಸಾಮರ್ಥ್ಯಗಳನ್ನು ಇದು ಹೊಂದಿದೆ..ರೆಡ್ಮಿ 12 ಸಿರೀಸ್ ಪ್ರೀಮಿಯಂ ಸ್ಮಾರ್ಟ್ ಫೋನ್ ಅನುಭವ ನೀಡುತ್ತದೆ ಮತ್ತು ಇದು ಫ್ಲ್ಯಾಗ್ ಶಿಪ್ ಗ್ರೇಡ್ನ ಕ್ರಿಸ್ಟಲ್ ಗ್ಲಾಸ್ ಬ್ಯಾಕ್ ವಿನ್ಯಾಸ ಹೊಂದಿದೆ. ಇಷ್ಟಾದರೂ ಇವುಗಳ ಬೆಲೆ ತುಂಬಾ ಸೂಕ್ತವಾಗಿದ್ದು, ಈ ಬೆಲೆಯಲ್ಲಿ ಅಸಾಧಾರಣ ಕಾರ್ಯಕ್ಷಮತೆಯನ್ನು ನೀಡುತ್ತವೆ. ನಿಜ ಹೇಳಬೇಕೆಂದರೆ ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟು ಒಳ್ಳೆಯ ಫೋನ್ ಸಿಗುತ್ತಿರುವುದು ಹೊಸ ಮಾನದಂಡವನ್ನೇ ಸ್ಥಾಪಿಸಿದೆ.
ರೆಡ್ಮಿ-12 4ಜಿ ಖರೀದಿಸುವ ಗ್ರಾಹಕರು ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಬಳಸಿ ಖರೀದಿಸಿದರೆ 1,000 ರೂ.ಗಳ ತ್ವರಿತ ರಿಯಾಯಿತಿ ಪಡೆಯಬಹುದು. ಹಾಗೆಯೇ ಎಕ್ಚೇಂಜ್ ಆಫರ್ ಕೂಡ ಲಭ್ಯವಿದ್ದು ಈಗಾಗಲೇ ತಮ್ಮ ಬಳಿ ಇರುವ 4 ಜಿಬಿ ಮಾದರಿಯ ಶಿಯೋಮಿ ಫೋನ್ನ್ನು ನೀಡಿ ಹೊಸ ಫೋನ್ ಮೇಲೆ 1,000 ರೂ.ಗಳ ವಿನಿಮಯ ಬೋನಸ್ ಪಡೆಯಬಹುದು.
ರೆಡ್ಮಿ-12 4ಜಿ ಈಗ 4ಜಿಬಿ +128 ಜಿಬಿಗೆ 8,999 ರೂ.ಗೆ ಮತ್ತು 6 ಜಿಬಿ + 128 ಜಿಬಿಗೆ 10,499 ರೂ.ಗೆ Mi ಡಾಟ್ com, Flipkart ಡಾಟ್ com, ಎಂಐ ಹೋಮ್ ಮತ್ತು ಎಂಐ ಸ್ಟುಡಿಯೋ ಮತ್ತು ಅಧಿಕೃತ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿದೆ. ಹಾಗೆಯೇ ರೆಡ್ಮಿ-12 5ಜಿ 4 ಜಿಬಿ + 128 ಜಿಬಿಗೆ 10,999 ರೂ., 6 ಜಿಬಿ + 128 ಜಿಬಿಗೆ 12,499 ರೂ ಮತ್ತು 8 ಜಿಬಿ + 256 ಜಿಬಿಗೆ 14,499 ರೂ. ಬೆಲೆಗಳಲ್ಲಿ Mi ಡಾಟ್ com, Amazon ಡಾಟ್ com, ಎಂಐ ಹೋಮ್ ಮತ್ತು ಎಂಐ ಸ್ಟುಡಿಯೋ ಮತ್ತು ಅಧಿಕೃತ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿದೆ.
ಜಾಗತಿಕವಾಗಿ ಪಾದಾರ್ಪಣೆ ಮಾಡುವುದರೊಂದಿಗೆ ಭಾರತದಲ್ಲಿಯೂ ರೆಡ್ಮಿ-12 5ಜಿ ಫೋನ್ಗಳನ್ನು ಪರಿಚಯಿಸಿದ ಶಿಯೋಮಿ ಮತ್ತೊಮ್ಮೆ ಸಾಟಿಯಿಲ್ಲದ 5ಜಿ ಅನುಭವಗಳನ್ನು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುವ ಮೂಲಕ ದೇಶದ ಮುಂದಿನ ಡಿಜಿಟಲ್ ಕ್ರಾಂತಿಯ ಅಲೆಯನ್ನು ಮುನ್ನಡೆಸುವ ಕಂಪನಿಯಾಗಿ ಹೊರಹೊಮ್ಮಿದೆ.