ಬೆಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶವನ್ನು ಬಿಡುಗಡೆ ಮಾಡಿದರು. ಈ ವರ್ಷದ ಫಲಿತಾಂಶದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಒಟ್ಟು ಶೇಕಡಾ 86ರಷ್ಟು ಫಲಿತಾಂಶ ದಾಖಲಾಗಿದೆ. ಇದು ಕಳೆದ ವರ್ಷಕ್ಕಿಂತ ಸುಮಾರು 12.50 ಶೇಕಡಾ ಹೆಚ್ಚಳವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ವಾಣಿಜ್ಯ ವಿಭಾಗದ ಟಾಪರ್
- ದಿಶಾ – 600 ಅಂಕ (ದಕ್ಷಿಣ ಕನ್ನಡದ ಆಳ್ವಾಸ್ ಕಾಲೇಜು)
- ಅದಿತಿ ಬಾಪು – 600 ಅಂಕ (ಜೈನ್ ಕಾಲೇಜು, ಬೆಂಗಳೂರು)
ಕಲಾ ವಿಭಾಗ
- ಅರ್ಚನಾ, ಸಂಗೀತಾ – 598 ಅಂಕ (ಕೊಟ್ಟೂರಿನ ಇಂದೂ ಪಿಯು ಕಾಲೇಜು)
ವಿಜ್ಞಾನ ವಿಭಾಗದಲ್ಲಿ ಟಾಪರ್
- ಶಮನ್ಯು ಎಸ್ ಶೆಟ್ಟಿ, ನಂದನ್ ನಾಯಕ್ – 598 ಅಂಕ (ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜು)
- ವೈಷ್ಣವಿ, ಅನರ್ವಿ -597 (ಕಾರ್ಕಳದ ಜ್ಞಾನಸುಧಾ ಪಿಯು )

















