ಮೊರಾಕೊದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ: 300 ಜನ ಸಾವನ್ನಪ್ಪಿರುವ ಅಂದಾಜು

ಶುಕ್ರವಾರ ತಡರಾತ್ರಿ ಮೊರಾಕೊದಲ್ಲಿ 6.8 ತೀವ್ರತೆಯ ಪ್ರಬಲವಾದ ಅಪ್ಪಳಿಸಿದ ನಂತರ ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ ಜಜೀರಾ ಸುದ್ದಿ ಸಂಸ್ಥೆಯ ಪ್ರಕಾರ, ಭೂಕಂಪದ ಕೇಂದ್ರವು ಮರ್ರೆಕೇಶ್‌ನ ಪಶ್ಚಿಮಕ್ಕೆ 72 ಕಿಲೋಮೀಟರ್ ದೂರದಲ್ಲಿದ್ದು, ಇದು ಇಲ್ಲಿನ ಪ್ರಮುಖ ಆರ್ಥಿಕ ಕೇಂದ್ರವಾಗಿದೆ. UNESCO ವಿಶ್ವ ಪರಂಪರೆಯ ತಾಣವಾಗಿರುವ ಹಳೆಯ ನಗರವನ್ನು ಸುತ್ತುವರೆದಿರುವ ಕೆಂಪು ಗೋಡೆಗಳು ಸಹ ಹಾನಿಗೊಳಗಾಗಿವೆ.

ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪವು ಆರಂಭದಲ್ಲಿ 6.8 ರ ತೀವ್ರತೆಯನ್ನು ಹೊಂದಿದ್ದು ಅದು ರಾತ್ರಿ 11:11 ಕ್ಕೆ ಅಪ್ಪಳಿಸಿತು ಮತ್ತು ಕಂಪನವು ಹಲವಾರು ಸೆಕೆಂಡುಗಳ ಕಾಲ ನಡೆಯಿತು. ಆದರೆ, ಮೊರಾಕೊದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‌ವರ್ಕ್ ಭೂಕಂಪವನ್ನು ರಿಕ್ಟರ್ ಮಾಪಕದಲ್ಲಿ 7 ಎಂದು ಅಳೆದಿದೆ.

https://twitter.com/i/status/1700352266480353325

ಮೊದಲ ಭೂಕಂಪದ ನಂತರ ಮತ್ತೊಮ್ಮೆ 4.9 ರಿಕ್ಟರ್ ಮಾಪಕದ ಭೂಕಂಪವು 19 ನಿಮಿಷಗಳ ಕಾಲ ಭೂಮಿಯನ್ನು ನಡುಗಿಸಿತು ಎಂದು ಯುಎಸ್ ಏಜೆನ್ಸಿ ಹೇಳಿದೆ. ಪೋರ್ಚುಗೀಸ್ ಇನ್‌ಸ್ಟಿಟ್ಯೂಟ್ ಫಾರ್ ಸೀ ಅಂಡ್ ಅಟ್ಮಾಸ್ಫಿಯರ್ ಮತ್ತು ಅಲ್ಜೀರಿಯಾದ ಸಿವಿಲ್ ಡಿಫೆನ್ಸ್ ಏಜೆನ್ಸಿ ಪ್ರಕಾರ, ಭೂಕಂಪವು ಪೋರ್ಚುಗಲ್ ಮತ್ತು ಅಲ್ಜೀರಿಯಾದಷ್ಟು ದೂರದ ಪ್ರದೇಶದಲ್ಲಿಯೂ ಅನುಭವಕ್ಕೆ ಬಂದಿದೆ.