ಮಂಗಳೂರು: ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ವಳಚ್ಚಿಲ್ ಹಾಗೂ ಕೊಡಿಯಾಲ್‌ಬೈಲ್‌ನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ 25 ವಿದ್ಯಾರ್ಥಿಗಳು ಒಟ್ಟು 600 ಅಂಕಗಳಲ್ಲಿ 590 ಕ್ಕಿಂತ ಅಧಿಕ ಅಂಕಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಒಟ್ಟು ಪರೀಕ್ಷೆ ಬರೆದ 1352 ವಿದ್ಯಾರ್ಥಿಗಳಲ್ಲಿ 1328 ವಿದ್ಯಾರ್ಥಿಗಳು ಅಂದರೆ ಶೇ.98.27ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಪದವಿ ಪೂರ್ವ ಶಿಕ್ಷಣದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
580ಕ್ಕಿಂತ ಅಧಿಕ ಅಂಕವನ್ನು 152 ವಿದ್ಯಾರ್ಥಿಗಳು ಪಡೆದಿದ್ದು, ಶೇ. 95ಕ್ಕಿಂತ ಅಧಿಕ ಅಂಕವನ್ನು 211 ವಿದ್ಯಾರ್ಥಿಗಳು ಪಡೆದಿದ್ದು, ಶೇ.90ಕ್ಕಿಂತ ಅಧಿಕ ಅಂಕವನ್ನು 714 ವಿದ್ಯಾರ್ಥಿಗಳು, ಶೇ.85ಕ್ಕಿಂತ ಅಧಿಕ ಅಂಕವನ್ನು 984 ವಿದ್ಯಾರ್ಥಿಗಳು ಪಡೆದಿದ್ದಾರೆ.
2 ವಿದ್ಯಾರ್ಥಿಗಳು ಐದು ವಿಷಯಗಳಲ್ಲಿ, 18 ವಿದ್ಯಾರ್ಥಿಗಳು ನಾಲ್ಕು ವಿಷಯಗಳಲ್ಲಿ, 75 ವಿದ್ಯಾರ್ಥಿಗಳು ಮೂರು ವಿಷಯಗಳಲ್ಲಿ, 109 ವಿದ್ಯಾರ್ಥಿಗಳು ಎರಡು ವಿಷಯಗಳಲ್ಲಿ ಹಾಗೂ 245 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ಇನ್ನು ಫಿಸಿಕ್ಸ್ ನಲ್ಲಿ 184 ವಿದ್ಯಾರ್ಥಿಗಳು, ಕೆಮೆಸ್ಟ್ರಿಯಲ್ಲಿ 139, ಬಯೋಲಾಜಿಯಲ್ಲಿ 87, ಮ್ಯಾಥಮೆಟಿಕ್ಸ್ನಲ್ಲಿ 284, ಸ್ಟಾಟಿಸ್ಟಿಕ್ಸ್ನಲ್ಲಿ 6, ಕಂಪ್ಯೂಟರ್ ಸೈನ್ಸ್ನಲ್ಲಿ 22, ಸಂಸ್ಕೃತದಲ್ಲಿ 42, ಹಿಂದಿಯಲ್ಲಿ 7 ಮತ್ತು ಕನ್ನಡದಲ್ಲಿ 1 ವಿದ್ಯಾರ್ಥಿ ನೂರಕ್ಕೆ ನೂರು ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.
592 ಅಂಕ ಪಡೆದ ನೇಹಾ ಶಬದಿ ಹಾಗೂ 586 ಅಂಕ ಪಡೆದ ಈಶಾನ್ಯ ಬಿ.ಯು ಐದು ವಿಷಯಗಳಲ್ಲಿ ತಲಾ ನೂರು ಅಂಕ ಪಡೆದ್ದಾರೆ. ವಿಜಯಲಕ್ಷ್ಮಿ ಯು. ಉಳ್ಳೆಗಡ್ಡಿ ಹಾಗೂ ಸಿಯಾ ದಯಾನಂದ ಚೌಟ 600ರಲ್ಲಿ 595 ಅಂಕ ಪಡೆದು ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅನುಜ್ಞಾ ಕೆ., ಸಂಜನಾ ಪಿ.ವಿ., ಪ್ರಿಯಾ ಅಶೋಕ್ ಪಾಟೀಲ್ ಅವರು 594 ಅಂಕ ಪಡೆದಿದ್ದಾರೆ. ಕನ್ನಿಕಾ ಜಿ. ಭಟ್, ಭುವನಾ ಎಂ.ಬಿ., ಚಂದನಾ ಬಿ.ಆರ್. 593 ಅಂಕ ಪಡೆದಿದ್ದಾರೆ. ಎಚ್. ಆಶ್ರಿತಾ ಶೆಟ್ಟಿ, ದುರ್ಗಾದೀಪಾ ಪಿ., ಸ್ಪೂರ್ತಿ ನಾಗನೂರ್ 592 ಅಂಕ ಪಡೆದಿದ್ದಾರೆ. ವರ್ಷಾ ಸಿ.ಎಂ., ವೀಣಾ ಎಂ.ಡಿ., ಪ್ರತೀಕ್ಷಾ ಎಲ್. ಬಾಬು, ಅನ್ನಪೂರ್ಣ ಎಸ್., ಅದಿತ್ಯಾ ಕಾಮತ್ ಅಮ್ಮೇಂಬಳ, ಅರ್ಹನ್ ವಿಲಾಸ್ ಕೆ., ಪ್ರಗತಿ ಶ್ರೀಧರ್ ನಾಯ್ಕ, ಮೇಘಾ ಶೇಟ್, ಸುಹಾಸ್ ರಾಜೇಶ್ (591), ಸಾನ್ವಿ ಎಸ್. ಕೊಂಡೆ, ಘಾನವಿ, ಪಾಯಲ್ ಕಾವರ್, ಬಿ. ಆದಿತ್ಯ ಹೊಳ್ಳ (590), ಪೃಥ್ವಿ ಎಂ., ಅಭಿಷೇಕ್ ವೆಂಕಟೇಶ್ ನಾಯ್ಕ, ಸಾಕ್ಷಿ ಕೆ., ರಾಕೇಶ್ ಕೃಷ್ಣ ಕೆ., ಸಿಂಧುಶ್ರೀ, ಪ್ರಜ್ಞಾ ಬಿ. ಶೆಟ್ಟಿಗಾರ್ (589), ಅನುಪಮಾ ಟಿ., ಹಿಮಾಂಶು ಎಲ್., ದೀಪ್ತಿ ಕಲ್ಲೂರ್, ಅನಘಾ ಮುಲಿಮನಿ, ಸಮೀದ್ ಅಹ್ಮದ್, ಭರತ್ ಕುಮಾರ್ ವೈ ರೇವದಕುಂಡಿ, ಸಮೃದ್ಧಿ ನಾನಿಕರ್, ಇಶಿತಾ ಶ್ರೀಕಾಂತ್ ಝನ್ವಾರ್, ಗೌರವ್ ನಾಯಕ್ ಎಚ್. (588), ಶೃಂಗಾ ಎಸ್.ರೆಡ್ಡಿ, ರಚನಾ ಕೆ., ದಿಯಾ ಪಾಟೀಲ್, ಸೌಜನ್ಯ ಪಟ್ಟೆಡ್, ವಿನಮೃತಾ ಎಸ್.ಪಿ., ವಿವೇಕ್ ವಿ.ಎಂ., ಪ್ರಣವ್ ಎಸ್., ದಿಶಾ ಪಿ.ಎಂ., ಅನ್ಸಬಾ, ಕಶ್ವಿ ಬಿ.ಕೆ., (587), ಗಂಗಾಶ್ರೀ ಎಂ.ಕೆ., ಸಬಸಿದ್ದಿಕಪಟೇಲ್, ಪ್ರೀತಮ್ ಎಂ.ಆರ್., ಕೃಪಾಂಗಿ ಆರ್.ಗೌಡ, ತನುಜಾ ಲಕ್ಷ್ಮಣ್ ಅಲೂರ್, ಪಿ. ಜಸ್ಮಿತಾ, ಶರಣ್ ಕೃಷ್ಣ ಕೊಂಡಿ, ಚಿನ್ಮಯಿ ಸಿ.ಎಚ್., ಜೆರಿನ್ ಪಿ.ಐಸಾಕ್, ಶ್ರೀವರ್ಧನ್, ವಿಪುಲ್ ಶಿವಕುಮಾರ್ ಜೋಶಿ, ಗೌರವ್ ಜಿ.ಆರ್. (586), ಪ್ರತೀಕ್ಷಾ ಎಸ್.ಪಿ., ವರ್ಷಾ ಜಿ.ವೈ., ಕೃಷ್ಣಮೂರ್ತಿ ವಿಜಯ ಕುಮಾರ್ ಪೂಜಾರ್, ಶಶಿ ಚಂದನ ಬಿ.ಎಸ್., ಕುಶಿ ಡಿ.ಆರ್., ಕುಸುಮತಿ ಎಂ., ಮಣಿಕಂಠ ದರ್ಶಂಕರ್, ಯಶಸ್ವಿನಿ ಎಸ್. ಬಾಲಪ್ಪನವರ್, ತನುಶ್ರೀ ಗಡಿಗೆಪ್ಪ ಚಿತ್ತರಗಿ, ವಿಸ್ಮಯ್ ಎಂ., ಅಂಕಿತಾ ಸಜ್ಜನ್, ಸನಿಕಾ ಉಪ್ಪರಿಗೆ ಜೆ.ಬಿ., ತೇಜಸ್ ಕೆ.ರಾಯ್ಸದ್, ಶ್ರೇಯಸ್ ಭಟ್, ಶ್ರೇಯ ಸದಾನಂದ, ಇಫ್ರಾನಾಝ್, ಶ್ರಾವ್ಯ ಆರ್., ನಿಧಿ ಭಟ್ (585) ಅಂಕ ಪಡೆದುಕೊಂಡಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ಅವರು, ಆಡಳಿತ ವರ್ಗ, ಪ್ರಾಂಶುಪಾಲರು, ಎಲ್ಲಾ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳ ಪರವಾಗಿ ಅಭಿನಂದಿಸಿರುತ್ತಾರೆ.
ಪ್ರತೀ ವರ್ಷ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿರುವ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಈ ವರ್ಷವೂ ಅದೇ ಸಾಧನೆಯ ಹಾದಿಯಲ್ಲಿದೆ.