ರಿಲ್ಯಾಕ್ಸ್ ಮೂಡ್ನಲ್ಲಿರುವ ನಟಿ ಪ್ರವಾಸ, ಮೂವಿ ಟೈಮ್, ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ಕೊಡುವ ಮೂಲಕ ತಮ್ಮ ದಿನ ಕಳೆಯುತ್ತಿದ್ದಾರೆ. ಮತ್ತೊಂದೆಡೆ ಆರೋಗ್ಯ ಚೇತರಿಕೆ ಕಡೆ ಗಮನ ಹರಿಸಿದ್ದಾರೆ ಎಂಬ ವರದಿಗಳೂ ಇವೆ.ದಕ್ಷಿಣ ಚಿತ್ರರಂಗದ ಟಾಪ್ ನಟಿ ಸಮಂತಾ ರುತ್ ಪ್ರಭು ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.ಸಾಲ ಪಡೆದಿರುವ ವದಂತಿಗಳ ಬಗ್ಗೆ ಸೌತ್ ಸುಂದರಿ ಸಮಂತಾ ರುತ್ ಪ್ರಭು ಸ್ಪಷ್ಟನೆ ಕೊಟ್ಟಿದ್ದಾರೆ.ತನ್ನನ್ನು ತಾನು ನಿಭಾಯಿಸಿಕೊಳ್ಳಲು ಸಮರ್ಥ: ತಮ್ಮ ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ಹೇಳಲಾಗಿದೆ. ಅದಾಗ್ಯೂ, ನಟಿ ತನ್ನ ವೃತ್ತಿಜೀವನದಲ್ಲಿ ಸಾಕಷ್ಟು ಗಳಿಸಿದ್ದೇನೆ. ತನ್ನನ್ನು ತಾನು ನಿಭಾಯಿಸಿಕೊಳ್ಳಲು ಸಮರ್ಥಳಾಗಿದ್ದೇನೆ ಎಂದು ತಿಳಿಸಿ ಆ ವರದಿಗಳನ್ನು ತಳ್ಳಿಹಾಕಿದ್ದಾರೆ.
ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ವದಂತಿ: ಮಯೋಸಿಟಿಸ್ ವಿರುದ್ಧ ಹೊರಾಡುತ್ತಿರುವ ಶಾಕುಂತಲಂ ನಟಿ ಚಿಕಿತ್ಸೆ ಪಡೆಯಲು ಸಜ್ಜಾಗಿದ್ದಾರೆ ಎಂಬುದು ನಿಮಗೆ ತಿಳಿದಿದೆ. ಆದರೆ ಶ್ರೀಮಂತ ನಟಿ ಚಿಕಿತ್ಸೆಗಾಗಿ 25 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನುವ ಸುದ್ದಿ ಶುಕ್ರವಾರ ಸದ್ದು ಮಾಡಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದಂತೆ ಬರುವ ಊಹಾಪೋಹಗಳಿಗೆ ನೇರ ಉತ್ತರ ಕೊಡಲು ಹೆಸರುವಾಸಿಯಾಗಿರುವ ಬಹುಬೇಡಿಕೆ ನಟಿ ಇದೀಗ ಈ ವದಂತಿಗಳಿಗೂ ನೇರವಾಗಿ ತೆರೆ ಎಳೆದಿದ್ದಾರೆ
ಸಮಂತಾ ಸಿನಿಮಾಗಳು: ಇನ್ನೂ ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಇತ್ತೀಚೆಗಷ್ಟೇ ವಿದೇಶದಿಂದ ಮರಳಿದ್ದಾರೆ. ಹೊರದೇಶಗಳಲ್ಲಿ ಕೆಲ ಕಾಲ ಕಳೆದು ರಿಲ್ಯಾಕ್ಸ್ ಮೂಡ್ಗೆ ಹೋಗಿದ್ದಾರೆ. ಇನ್ನೂ ಮೊದಲೇ ತಿಳಿಸಿದಂತೆ ಸದ್ಯ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವ ಸಲುವಾಗಿ ವೃತ್ತಿಯಿಂದ ಸಣ್ಣ ಬ್ರೇಕ್ ಪಡೆದಿದ್ದಾರೆ. ಮುಂದಿನ ಸಿನಿಮಾ ಗಮನಿಸುವುದಾದರೆ ಕುಶಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ದೇವರಕೊಂಡ ಜೊತೆ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕರಾದ ರಾಜ್ ಮತ್ತು ಡಿಕೆ ಜೋಡಿಯ ಸಿಟಾಡೆಲ್ ಶೂಟಿಂಗ್ ಅನ್ನೂ ಪೂರ್ಣಗೊಳಿಸಿದ್ದಾರೆ. ಬಾಲಿವುಡ್ ನಟ ವರುಣ್ ಧವನ್ ಜೊತೆ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದೊಂದು ಆಯಕ್ಷನ್ ಜಾನರ್ ಸೀರಿಸ್ ಆಗಿದೆ.ಸ್ಯಾಮ್ ಇನ್ಸ್ಟಾ ಸ್ಟೋರಿ: ಮಯೋಸಿಟಿಸ್ ಚಿಕಿತ್ಸೆಗಾಗಿ ಸಾಲ ಪಡೆದಿರುವ ವಿಚಾರಕ್ಕೆ ಸ್ಪಷ್ಟನೆ ಕೊಡಲು ನಟಿ ಇನ್ಸ್ಟಾಗ್ರಾಮ್ ವೇದಿಕೆಯನ್ನು ಬಳಸಿಕೊಂಡರು. ”ಮಯೋಸಿಟಿಸ್ ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ!?. ಯಾರೋ ನಿಮಗೊಂದು ಕೆಟ್ಟ ಡೀಲ್ನ ವಿಷಯ ತಂದು ಕೊಟ್ಟಿದ್ದಾರೆ. ನಾನು ಅದರಲ್ಲಿ (25 ಕೋಟಿ ರೂ.) ಚಿಕ್ಕ ಪ್ರಮಾಣದಷ್ಟು ಮಾತ್ರ ಖರ್ಚು ಮಾಡುತ್ತಿದ್ದೇನೆ ಎಂಬುದನ್ನು ಹೇಳಲು ಖುಷಿಯಾಗಿದೆ” ಎಂದು ಇನ್ಸ್ಟಾ ಸ್ಟೋರಿನಲ್ಲಿ ತಿಳಿಸಿದ್ದಾರೆ.
ಬರಹ ಮುಂದುವರಿಸಿದ ಸಿಟಾಡೆಲ್ ನಟಿ, ”ನಾನು ಸಾಕಷ್ಟು ದುಡಿದಿದ್ದೇನೆ. ನನ್ನ ಸ್ವಂತ ಖರ್ಚು ನೋಡಿಕೊಳ್ಳಲು ಬೇರೆಯವರ ಸಹಾಯ ಕೇಳುವ ಪರಿಸ್ಥಿತಿ ಇಲ್ಲ. ಯಾವುದೇ ತೊಂದರೆಯಾಗದಂತೆ, ತನ್ನನ್ನು ತಾನು ನೋಡಿಕೊಳ್ಳಲು ಸಮರ್ಥಳಾಗಿದ್ದೇನೆ” ಎಂದು ತಿಳಿಸಿದ್ದಾರೆ.