ಅಮೆರಿಕಾದಿಂದ ಸುಮಾರು 2,417 ಮಂದಿ ಭಾರತೀಯರು ಗಡಿಪಾರು: ವಿದೇಶಾಂಗ ಇಲಾಖೆ ಹೇಳಿಕೆ

ಹೊಸದಿಲ್ಲಿ: ಈ ವರ್ಷದ ಜನವರಿ ತಿಂಗಳಿನಿಂದೀಚೆಗೆ 2,417 ಭಾರತೀಯ ಪ್ರಜೆಗಳು ಅಮೆರಿಕದಿಂದ ಗಡಿಪಾರಾಗಿದ್ದಾರೆ ಅಥವಾ ಸ್ವದೇಶಕ್ಕೆ ವಾಪಸಾಗಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ ಜೈಸ್ವಾಲ್ ಶುಕ್ರವಾರ ತಿಳಿಸಿದ್ದಾರೆ.

ಕಾನೂನಾತ್ಮಕ ಮಾರ್ಗಗಳ ಮೂಲಕ ವಲಸೆಯನ್ನು ಭಾರತ ಉತ್ತೇಜಿಸುತ್ತದೆ. ಭಾರತವು ಅಕ್ರಮ ವಲಸೆಗೆ ವಿರುದ್ಧವಾಗಿದೆ ಎಂದು ಜೈಸ್ವಾಲ್‌ ಹೇಳಿದರು.

ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಲ್ಪಟ್ಟವರ ರಾಷ್ಟ್ರೀಯತೆಯನ್ನು ಸರಕಾರವು ದೃಢೀಕರಿಸಿಕೊಳ್ಳಲಿದೆ ಎಂದವರು ಹೇಳಿದ್ದಾರೆ.