ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದೊಡ್ಡ ಹೆಸರಿಸದ ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರು

ನವದೆಹಲಿ: ಪರಾಕ್ರಮ್ ದಿವಸ್ ದಿನದಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದೊಡ್ಡ ಹೆಸರಿಸದ ದ್ವೀಪಗಳನ್ನು ಹೆಸರಿಸುವ ಸಮಾರಂಭದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಿರುವ ನೇತಾಜಿಯ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಪ್ರಧಾನಿ ಅನಾವರಣಗೊಳಿಸಿದರು.

Image

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಇಂದು ಐತಿಹಾಸಿಕ ದಿನವಾಗಿದೆ ಎಂದ ಪ್ರಧಾನಿ ಮೋದಿ, “ಇತಿಹಾಸವನ್ನು ರಚಿಸುವಾಗ, ಭವಿಷ್ಯದ ಪೀಳಿಗೆಗಳು ಅದನ್ನು ನೆನಪಿಟ್ಟುಕೊಳ್ಳುವುದು, ಮತ್ತು ಮೌಲ್ಯಮಾಪನ ಮಾಡುವುದಲ್ಲದೆ, ಅದರಿಂದ ನಿರಂತರ ಸ್ಫೂರ್ತಿಯನ್ನು ಪಡೆಯುತ್ತವೆ” ಎಂದು ಹೇಳಿದರು.

ಅಂಡಮಾನ್ ಮತ್ತು ನಿಕೋಬಾರ್ ನ 21 ದ್ವೀಪಗಳ ನಾಮಕರಣ ಸಮಾರಂಭ ಇಂದು ನಡೆಯುತ್ತಿದ್ದು, ಅವುಗಳನ್ನು ಇನ್ನು ಮುಂದೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿನಿಂದ ಗುರುತಿಸಲಾಗುವುದು ಎಂದು ಪ್ರಧಾನಿ ಹೇಳಿದರು.

The growing attention on the Andaman and Nicobar Islands

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಇಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು ಮತ್ತು ಭಾರತದ ಮೊದಲ ಸ್ವತಂತ್ರ ಸರ್ಕಾರವನ್ನು ರಚಿಸಲಾಯಿತು ಎಂದು ತಿಳಿಸಿದರು. ಈ ನೆಲದಲ್ಲಿ ವೀರ್ ಸಾವರ್ಕರ್ ಮತ್ತು ಅವರಂತಹ ಅನೇಕ ವೀರರು ದೇಶಕ್ಕಾಗಿ ತಪಸ್ಸು ಮತ್ತು ತ್ಯಾಗದ ಸರ್ವೋನ್ನತ ಬಲಿದಾನವನ್ನು ನೀಡಿರುವ ಬಗ್ಗೆ ಜ್ಞಾಪಿಸಿದರು.

The Andaman and Nicobar Islands: India's Eastern Anchor in a Changing Indo-Pacific

ಜನವರಿ 2018 ರವರೆಗೆ 21 ಭಾರತೀಯ ಯೋಧರಿಗೆ ಪರಮವೀರ ಚಕ್ರವನ್ನು ನೀಡಲಾಗಿದ್ದು, ಅದರಲ್ಲಿ 14 ಮರಣೋತ್ತರ ಮತ್ತು 16 ಭಾರತ-ಪಾಕಿಸ್ತಾನ ಯುದ್ದದಲ್ಲಿ ಭಾಗವಹಿಸಿದ ಯೋಧರಿಗೆ ನೀಡಲಾಗಿದೆ. 20 ಮಂದಿ ಭಾರತೀಯ ಸೇನಾ ದಳದ ಯೋಧರಾಗಿದ್ದರೆ ಮತ್ತು ಒಬ್ಬರು ಭಾರತೀಯ ವಾಯುಪಡೆಯ ಯೋಧರಾಗಿದ್ದಾರೆ.

ಮೇಜರ್ ಸೋಮನಾಥ್ ಶರ್ಮಾ, ಪರಮ ವೀರ ಚಕ್ರ ಸ್ವೀಕರಿಸಿದ ಮೊದಲಿಗರು. ನಾಯಕ್ ಜಾದುನಾಥ್ ಸಿಂಗ್, 2ನೇ ಲೆಫ್ಟಿನೆಂಟ್ ರಾಮ ರಾಘೋಬಾ ರಾಣೆ, ಬಾಂಬೆ ಇಂಜಿನಿಯರ್ಸ್, ಕಂಪನಿ ಹವಿಲದಾರ್ ಮೇಜರ್ ಪಿರು ಸಿಂಗ್, ಲ್ಯಾನ್ಸ್ ನಾಯಕ್ ಕರಮ್ ಸಿಂಗ್
ಕ್ಯಾಪ್ಟನ್ ಗುರ್ಬಚನ್ ಸಿಂಗ್ ಸಲಾರಿಯಾ, ಮೇಜರ್ ಧನ್ ಸಿಂಗ್ ಥಾಪಾ,ಸುಬೇದಾರ್ ಜೋಗಿಂದರ್ ಸಿಂಗ್, ಮೇಜರ್ ಶೈತಾನ್ ಸಿಂಗ್,
ಲೆಫ್ಟಿನೆಂಟ್ ಕರ್ನಲ್ ಎ ಬಿ ತಾರಾಪೋರ್, ಕಂಪನಿ ಕ್ವಾರ್ಟರ್‌ಮಾಸ್ಟರ್ ಹವಾಲ್ದಾರ್ ಅಬ್ದುಲ್ ಹಮೀದ್, ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ,ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್, ಮೇಜರ್ ಹೋಶಿಯಾರ್ ಸಿಂಗ್ , ನಾಯಬ್ ಸುಬೇದಾರ್ ಬನಾ ಸಿಂಗ್, ಮೇಜರ್ ರಾಮಸ್ವಾಮಿ ಪರಮೇಶ್ವರಮ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಮತ್ತು ರೈಫಲ್ ಮ್ಯಾನ್ ಸಂಜಯ್ ಕುಮಾರ್ ಪರಮವೀರ ಚಕ್ರ ಪುರಸ್ಕೃತ ಯೋಧರು.