ನಿಟ್ಟೆ: ಯೋಗಾಭ್ಯಾಸವೆಂಬುದು ಪ್ರತಿಯೋವ೯ ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯವೃದ್ಧಿಯಲ್ಲಿ ಬಹಳಷ್ಟು ಉಪಯುಕ್ತವಾದ ಅಂಶವಾಗಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಕಾಲೇಜು ಹಾಗೂ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ವಿದ್ಯಾಥಿ೯ನಿಲಯದ ಸಹಯೋಗದಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿರುವ 21 ದಿನಗಳ ಯೋಗ ತರಬೇತಿ ಶಿಬಿರ, ‘ಯೋಗ ಉತ್ಸವ’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಜೂ.21 ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಈ ಶಿಬಿರದ ಪ್ರಯೋಜನವನ್ನು ವಿದ್ಯಾಥಿ೯ಗಳು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಕ್ಯಾಂಪಸ್‌ನ ಮೈಂಟೆನೆನ್ಸ್ & ಡೆವಲ್ಮೆಂಟ್ ನಿದೇ೯ಶಕ ಯೋಗೀಶ್ ಹೆಗ್ಡೆ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ, ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆಸಲಾಗುತ್ತಿರುವ ಈ ಶಿಬಿರವು ವಿದ್ಯಾಥಿ೯ಗಳಲ್ಲಿ ದೈಹಿಕ ಆರೋಗ್ಯ ಮಾನಸಿಕ ನೆಮ್ಮದಿ ಹಾಗೂ ಆಧ್ಯಾತ್ಮಿಕ ಅಂಶವನ್ನು ವೃದ್ಧಿಸುವ ಕೆಲಸ ಮಾಡಲಿದೆ. ಜೂ.21 ರಂದು ನಿಟ್ಟೆ ಕ್ಯಾಂಪಸ್‌ನಲ್ಲಿ ನೂರಾರು ಜನರನ್ನು ಒಟ್ಟುಗೂಡಿಸಿಕೊಂಡು ಒಂದು ಉತ್ತಮ ರೀತಿಯ ವಿಶ್ವ ಯೋಗದಿನಾಚರಣೆಯನ್ನು ಹಮ್ಮಿಕೊಳ್ಳುವ ಯೋಜನೆಯಿದೆ ಎಂದರು.
ತರಬೇತಿ ಶಿಬಿರದದಲ್ಲಿ ಭಾಗವಹಿಸಿದ್ದ ವಿದ್ಯಾಥಿ೯ಗಳು ಹಲವು ರೀತಿಯ ಯೋಗ ಭಂಗಿಗಳನ್ನು ಪ್ರದರ್ಶಿಸಿದರು.
ಯೋಗ ಶಿಬಿರದ ಸಂಯೋಜಕ ಡಾ.ಅಜಿತ್ ಹೆಬ್ಬಾಳೆ ಸ್ವಾಗತಿಸಿದರು, ನಿಟ್ಟೆ ತಾಂತ್ರಿಕ ಕಾಲೇಜಿನ ಯೋಗ ತಂಡವಾದ ಯೂಜ್ ಫಾರ್ ಲೈಫ್ ನ ವಿದ್ಯಾಥಿ೯ ನಾಯಕಿ ಶ್ರೀವಾಣಿ ಬಾಯರಿ ವಂದಿಸಿದರು.