ಉಡುಪಿ: ಮಲ್ಪೆ ಪಡುಕರೆಯಲ್ಲಿ ‘ಸಿರೆನಾ’ ಐಷಾರಾಮಿ ಬೀಚ್ ರೆಸಾರ್ಟ್ ಲೋಕಾರ್ಪಣೆ

ಉಡುಪಿ: ಕರಾವಳಿಯ ಪ್ರಕೃತಿ ಸೌಂದರ್ಯ, ಕಡಲ ಅಲೆಗಳ ನಿನಾದ ಹಾಗೂ ಸಮುದ್ರ–ಹಿನ್ನೀರಿನ ಸಂಗಮದ ರಮಣೀಯತೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಮಲ್ಪೆ ಸಮೀಪದ ಪಡುಕರೆಯಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ‘ಸಿರೆನಾ ಲಕ್ಷುರಿ ಬೀಚ್ ರೆಸಾರ್ಟ್’ ಶನಿವಾರ ಲೋಕಾರ್ಪಣೆಗೊಂಡಿತು.ಶ್ಯಾಮಿಲಿ ಸಮೂಹ ಸಂಸ್ಥೆಯ ಸಹಸಂಸ್ಥೆಯಾದ ಉಡುಪಿ ಕೋಸ್ಟಲ್ವುಡ್ ರೆಸಾರ್ಟ್ನ ಈ ಯೋಜನೆಯು ಸುಮಾರು 9 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ನಾಡೋಜ ಡಾ. ಜಿ. ಶಂಕರ್ ಅವರು ಗಣ್ಯರು, ಹಿತೈಷಿಗಳು ಹಾಗೂ ಕುಟುಂಬಸ್ಥರೊಂದಿಗೆ ದೀಪ ಪ್ರಜ್ವಲಿಸುವ […]