ಜಾಗತಿಕ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ದೊಡ್ಡ ಹೊಡೆತ, ಮೆಮೊರಿ ಚಿಪ್ಗಳಿಗೆ ತೀವ್ರ ಕೊರತೆ, ದುಬಾರಿಯಾಗುತ್ತಾ ಮೊಬೈಲ್ ಬೆಲೆ?

ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುಂಬರುವ ದಿನಗಳಲ್ಲಿ ಮೊಬೈಲ್ ಬೆಲೆಗಳು ಮತ್ತಷ್ಟು ದುಬಾರಿಯಾಗುವ ಸೂಚನೆ ಸಿಕ್ಕಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ‘ಕೌಂಟರ್ಪಾಯಿಂಟ್ ರಿಸರ್ಚ್’ (Counterpoint Research) ಬುಧವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2026ರಲ್ಲಿ ಜಾಗತಿಕ ಸ್ಮಾರ್ಟ್ಫೋನ್ ಸಾಗಣೆಯು (Shipments) ವಾರ್ಷಿಕ ಆಧಾರದ ಮೇಲೆ ಶೇ. 13.9 ರಷ್ಟು (ಸುಮಾರು ಶೇ. 14) ಕುಸಿಯುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ, ನಿರಂತರ ಮೆಮೊರಿ ಚಿಪ್ ಕೊರತೆ, ಹೆಚ್ಚಿದ ಬಿಡಿಭಾಗಗಳ ವೆಚ್ಚ ಮತ್ತು ಗ್ರಾಹಕರ ಕೊಳ್ಳುವ ಶಕ್ತಿ […]