ಉಡುಪಿ: ಪತ್ರಕರ್ತ ಉಮೇಶ್ ಮಾರ್ಪಳ್ಳಿ ಅವರಿಗೆ ಪಿತೃ ವಿಯೋಗ

ಉಡುಪಿ ಮಾರ್ಪಳ್ಳಿ ನಿವಾಸಿ ಸಂಜೀವ ಶೆಟ್ಟಿಗಾರ್ (86) ವಯೋಸಹಜ ಆರೋಗ್ಯ ಸಮಸ್ಯೆಯಿಂದ ಸೋಮವಾರ ಸಂಜೆ ವೇಳೆಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಹಿರಿಯ ಪತ್ರಕರ್ತ ಉಮೇಶ್ ಮಾರ್ಪಳ್ಳಿ ಸಹಿತ ಐವರು ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಇವರು ಕಳೆದ ಹಲವು ದಶಕಗಳ ಕಾಲ ನೇಕಾರ ವೃತ್ತಿ ನಡೆಸಿಕೊಂಡಿದ್ದರು. ಸೀರೆ ನೇಯಿಗೆಯಲ್ಲಿ ಪರಿಣತಿ ಹೊಂದಿದ್ದರು.
ಉದ್ಯೋಗವಕಾಶ

ಉಡುಪಿಯ Easy Life ಕಂಪನಿ ಒಂದಕ್ಕೆ ಬಿಲ್ಲಿಂಗ್ ಎಕ್ಸಿಕ್ಯೂಟಿವ್ ಹುದ್ದೆಗೆ ಉದ್ಯೋಗವಕಾಶ ನಡೆಯುತ್ತಿದೆ (Any Degree)ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9901876682
ನಯಂಪಳ್ಳಿ ಶ್ರೀ ಮಡಿ ಮಲ್ಲಿಕಾರ್ಜುನ ದೇವಸ್ಥಾನದ ದೀಪೋತ್ಸವ

ನಯಂಪಳ್ಳಿ ಶ್ರೀ ಮಡಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದಿನಾಂಕ ನವೆಂಬರ್ 28 ಶನಿವಾರ 2026 ದೀಪೋತ್ಸವ ನಡೆಯಲಿದೆ.ಅದೇ ದಿನ ಬೆಳಿಗ್ಗೆ ಉಷಕಾಲ ಪೂಜೆ 9.00 ಕ್ಕೆ ಪ್ರಾರ್ಥನೆ, ನವಕ ಪ್ರದಾನ ಹೋಮ ರುದ್ರಾಭಿಷೇಕ ಮಹಾಪೂಜೆ ಹಾಗೂ 12.30ಕ್ಕೆ ಅನ್ನಸಂತರ್ಪಣೆ ನಡೆಯಲ್ಲಿದೆ ರಾತ್ರಿ 7.15ಕ್ಕೆ ದೀಪರಾಧನೆ, ರಂಗಪೂಜೆ ನಡೆಯಲ್ಲಿರುವುದು ಎಂದು ದೇವಲಯಾದ ಪ್ರಕಟಣೆ ತಿಳಿಸಿದೆ.
ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ: ಭಾರತಕ್ಕೆ ಬರಲು ಸಜ್ಜಾಗುತ್ತಿದೆ BMW iX4 ಎಲೆಕ್ಟ್ರಿಕ್ ಕಾರು: ಒಂದೇ ಚಾರ್ಜ್ಗೆ 828 ಕಿ.ಮೀ. ರೇಂಜ್!

ಭಾರತದ ಐಷಾರಾಮಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲು ಜರ್ಮನಿಯ ಪ್ರತಿಷ್ಠಿತ ವಾಹನ ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯು (BMW) ಸಜ್ಜಾಗಿದೆ. ಕಂಪನಿಯು ತನ್ನ ನೂತನ ಎಲೆಕ್ಟ್ರಿಕ್ ಕೂಪೆ ಎಸ್ಯುವಿ ಮಾದರಿಯಾದ ‘ಬಿಎಂಡಬ್ಲ್ಯು iX4’ ವಿನ್ಯಾಸದ ಪೇಟೆಂಟ್ ಅನ್ನು ಭಾರತದಲ್ಲಿ ನೋಂದಾಯಿಸಿದೆ. ಇದರಿಂದ ಈ ಕಾರು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಕುರಿತು ಚರ್ಚೆ ಆರಂಭವಾಗಿದೆ. 2026ರ ಅಕ್ಟೋಬರ್ನಲ್ಲಿ ಜಾಗತಿಕವಾಗಿ ಅನಾವರಣಗೊಂಡಿರುವ ಈ ಕಾರು, ಬಿಎಂಡಬ್ಲ್ಯು iX3 ಮಾದರಿಯ ಕೂಪೆ ಎಸ್ಯುವಿ ಆವೃತ್ತಿಯಾಗಿದೆ. ಕಂಪನಿಯ Neue Klasse […]
ಅಪಘಾತ ತಡೆಗೆ ಸರಕಾರದ ಹೊಸ ಪ್ಲಾನ್, ರಾಜ್ಯದ 87 ಅಪಘಾತ ವಲಯಗಳಲ್ಲಿ ಎಐ ಸ್ಮಾರ್ಟ್ ಕ್ಯಾಮೆರಾ ಅಳವಡಿಕೆ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದ ಆಯ್ದ 87 ಅಪಘಾತ ವಲಯಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ 24ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುತಿಸಿರುವ 87 ಸ್ಥಳಗಳ ಪೈಕಿ ಈಗಾಗಲೇ 27 ಕಡೆ […]