ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: 2027ರ ಮೇ ವೇಳೆಗೆ ಪಿಂಕ್ ಲೈನ್ ಅಂಡರ್‌ಗ್ರೌಂಡ್ ಮೆಟ್ರೋ ಸಂಚಾರ ಆರಂಭ!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಪಿಂಕ್ ಲೈನ್‌ನ ಎತ್ತರಿಸಿದ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಚಾಲನೆ ನೀಡಿದ ಬೆನ್ನಲ್ಲೇ, ಇದೀಗ ಭೂಗತ ಮೆಟ್ರೋ ಮಾರ್ಗದ ಕಾಮಗಾರಿಯೂ ಅಂತಿಮ ಹಂತ ತಲುಪಿದೆ. ಮುಂದಿನ ಆರರಿಂದ ಏಳು ತಿಂಗಳೊಳಗೆ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸುವ ಗುರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹೊಂದಿದೆ. ಬನ್ನೇರುಘಟ್ಟ ಸೇರಿದಂತೆ ದಕ್ಷಿಣ ಬೆಂಗಳೂರಿನ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲಿರುವ ಪಿಂಕ್ ಲೈನ್ […]
ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ: ಟೇಕ್‌ಆಫ್‌ಗೆ 100 ಮೀಟರ್ ಬಾಕಿ ಇರುವಾಗ ಚಕ್ರಕ್ಕೆ ಹೊತ್ತಿಕೊಂಡ ಬೆಂಕಿ

ಮಂಗಳೂರು: ಪೈಲಟ್ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ವಿಮಾನ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ (ನ.16) ಸಂಜೆ ನಡೆದಿದೆ. ಟೇಕ್‌ಆಫ್‌ಗೆ ಕೇವಲ 100 ಮೀಟರ್ ಬಾಕಿ ಇರುವಾಗ ವಿಮಾನದ ತಳಭಾಗದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿದ್ದು, ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ವಿಮಾನಕ್ಕೆ ತುರ್ತು ಬ್ರೇಕ್ ಹಾಕಿ ರನ್‌ವೇಯಲ್ಲೇ ನಿಲ್ಲಿಸಿದ್ದಾರೆ. 229 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿ ಇದ್ದ ಇಂಡಿಗೋ ವಿಮಾನವು ಸಂಜೆ 6.10ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿತ್ತು. ರನ್‌ವೇಯಲ್ಲಿ ವೇಗವಾಗಿ […]