ದೆಹಲಿಯಲ್ಲಿ ಮತ್ತಷ್ಟು ಕುಸಿದ ಗಾಳಿಯ ಗುಣಮಟ್ಟ, , ದೀಪಾವಳಿಗೆ ವಾಯುಮಾಲಿನ್ಯ ಹೆಚ್ಚಳ: ಹಲವು ಪ್ರದೇಶಗಳಲ್ಲಿ ಅಪಾಯಕಾರಿ ಪರಿಸ್ಥಿತಿ

ನವದೆಹಲಿ: ದೀಪಾವಳಿ ಹಬ್ಬದ ಎರಡನೇ ದಿನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ಮುಂಜಾನೆ ನಗರದಾದ್ಯಂತ ದಟ್ಟ ಹೊಗೆ ಹಾಗೂ ಮಂಜು ಆವರಿಸಿದ್ದು, ಇಡೀ ನಗರವೇ ಹೊಗೆಯ ಮಡುವಿನಲ್ಲಿ ಮುಳುಗಿದಂತೆ ಕಂಡುಬಂದಿದೆ. ದಟ್ಟ ಹೊಗೆ ಮತ್ತು ಮಂಜಿನ ವಾತಾವರಣದಿಂದಾಗಿ ಮುಂಜಾನೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 400ರ ಗಡಿ ದಾಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಸಮೀರ್ […]
ಪಟಾಕಿ ಪ್ರಿಯರೇ ಇಲ್ಲಿ ಸ್ವಲ್ಪ ಗಮನಿಸಿ: ಪಟಾಕಿ ಸದ್ದಿಗೆ ಬೆಚ್ಚಿಬಿದ್ದು 14ನೇ ಮಹಡಿಯಿಂದ ಬಿದ್ದ ನಾಯಿ ಸಾವು!

ಬೆಂಗಳೂರು: ಪಟಾಕಿಗೆ ಜಾಸ್ತಿ ಆದ್ಯತೆ ನೀಡದೇ ಹಬ್ಬ ಆಚರಿಸಿ ಎಂದು ಇಡೀ ದೇಶದಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದರೂ ಪಟಾಕಿಯಿಂದ ಆಗುವ ಅನಾಹುತಗಳು ಮತ್ತೆ ಮತ್ತೆ ಕೇಳುತ್ತಲೇ ಇದೆ. ಮುಖ್ಯವಾಗಿ ಸಾಕು ಪ್ರಾಣಿಗಳು ಪಟಾಕಿ ಸದ್ದಿಗೆ ಹೆದರಿ ಸಾವನ್ನಪ್ಪುತ್ತವೆ. ಅಂತದ್ದೇ ಪ್ರಕರಣವೊಂದು ಈಗ ವರದಿಯಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಸಿಡಿಸಬೇಕು ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಬೆಂಗಳೂರಿನಲ್ಲಿ ಮಾತ್ರ ನಿಗದಿತ ಸಮಯ ಮೀರಿ ಪಟಾಕಿ […]
ಉಡುಪಿ: ಗುಂಡಿಬೈಲ್ ಪೆಟ್ರೋಲ್ ಪಂಪ್ ಮಾಲೀಕನ ಸಂಬಂಧಿ ಮೇಲೆ ಮಾರಣಾಂತಿಕ ಹಲ್ಲೆ

ಉಡುಪಿ: ನಗರದ ಗುಂಡಿಬೈಲ್ನ ಪೆಟ್ರೋಲ್ ಬಂಕ್ನಲ್ಲಿ ಮದ್ಯಪಾನ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವಿಚಾರವಾಗಿ ಬಂಕ್ ಮಾಲಕರ ಸಂಬಂಧಿ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ನ.7ರಂದು ರಾತ್ರಿ ನಡೆದಿದೆ. ನಿಟ್ಟೂರು ನಿವಾಸಿ ಆಶಿಶ್ ಶೆಟ್ಟಿ (44) ಹಲ್ಲೆಗೊಳಗಾದವರು. ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಖಾಸಗಿ ಬಸ್ ಚಾಲಕ ಆಕಾಶ್ ಎಂಬಾತ ಪೆಟ್ರೋಲ್ ಬಂಕ್ ಆವರಣದಲ್ಲಿ ಬಸ್ ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದ. ಇದನ್ನು ಗಮನಿಸಿದ ಆಶಿಶ್ ಶೆಟ್ಟಿ, ಬಂಕ್ ಆವರಣದಲ್ಲಿ ಮದ್ಯಪಾನ ಮಾಡದಂತೆ ಎಚ್ಚರಿಸಿದ್ದಾರೆ. ಈ ವಿಚಾರವಾಗಿ ಇಬ್ಬರ […]