ಟಿಪ್ಪರ್ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು

ಕುಂದಾಪುರ: ಬಳ್ಳೂರಿನಲ್ಲಿ ಅಕ್ಟೋಬರ್ 30ರಂದು ನಡೆದ ಟಿಪ್ಪರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಶಯಾನ್ ಟಿ.ಕೆ. (ಕಂಡೂರು) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ (ನ. 2) ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಗೂಗಲ್ ಮ್ಯಾಪ್ ತೋರಿಸಿದ ಶಾರ್ಟ್ಕಟ್ ನಂಬಿ ಕಾಡಿನೊಳಗೆ ಸಿಲುಕಿದ 9 ಟೆಕ್ಕಿಗಳು; ಕಾರಿನಲ್ಲೇ ಕಳೆದರು ಭಯಾನಕ ರಾತ್ರಿ!

ಚಾಮರಾಜನಗರ: ಗೂಗಲ್ ಮ್ಯಾಪ್ ತೋರಿಸುವ ದಾರಿಯನ್ನು ಸಂಪೂರ್ಣವಾಗಿ ನಂಬಿ ಪ್ರಯಾಣಿಸುವುದು ಕೆಲವೊಮ್ಮೆ ಅಪಾಯಕ್ಕೆ ಕಾರಣವಾಗಬಹುದು. ಇದಕ್ಕೆ ಚಾಮರಾಜನಗರದ ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆದ ಘಟನೆಯೇ ಸಾಕ್ಷಿ. ಗೂಗಲ್ ಮ್ಯಾಪ್ ತೋರಿಸಿದ ಶಾರ್ಟ್ಕಟ್ ರಸ್ತೆಯಲ್ಲಿ ಸಾಗಿದ ಬೆಂಗಳೂರಿನ ಒಂಬತ್ತು ಸಾಫ್ಟ್ವೇರ್ ಉದ್ಯೋಗಿಗಳು ಕಾರು ಕಂದಕಕ್ಕೆ ಬಿದ್ದ ಪರಿಣಾಮ ಇಡೀ ರಾತ್ರಿ ಕಾಡಿನಲ್ಲೇ ಸಿಲುಕಿಕೊಂಡಿದ್ದರು. ಅದೃಷ್ಟವಶಾತ್ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಮೈಸೂರಿನಿಂದ ಚೆನ್ನೈಗೆ ಹೊರಟವರು ಕಾಡಿನೊಳಗೆ! ಮೈಸೂರಿನ ದಸರಾ ದೀಪಾಲಂಕಾರವನ್ನು ವೀಕ್ಷಿಸಿದ ಬಳಿಕ ಬೆಂಗಳೂರಿನ ಒಂಬತ್ತು ಸಾಫ್ಟ್ವೇರ್ […]
ನಂದಿನಿ ಹಾಲಿನ ಬಳಿಕ ಇದೀಗ ಬಸ್ ಪ್ರಯಾಣ ದರವೂ ಏರಿಕೆ: ನ. 5ರಿಂದಲೇ ಹೊಸ ದರ ಜಾರಿ?

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯದಲ್ಲಿ ಬಸ್ ಪ್ರಯಾಣ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಪರಿಷ್ಕರಣೆ ಕುರಿತು ನಾಳೆಯೇ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ನವೆಂಬರ್ 5ರಿಂದಲೇ ಹೊಸ ದರ ಜಾರಿಗೆ ಬರಬಹುದು. ದರ ಏರಿಕೆಯ ಪ್ರಮಾಣ ನಿರ್ಧರಿಸಲು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಸಾರಿಗೆ ಇಲಾಖೆ ಹಾಗೂ ನಾಲ್ಕೂ ನಿಗಮಗಳ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ […]
ಸಂತ್ರಸ್ತೆಯ ವಿರುದ್ಧ ಅಪಪ್ರಚಾರ: 150 ಸಾಮಾಜಿಕ ಜಾಲತಾಣ ಖಾತೆಗಳ ಗುರುತು ಪತ್ತೆ

ಉಡುಪಿ: ಪೆರ್ಡೂರಿನ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ 150 ಖಾತೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಸಂತ್ರಸ್ತೆಯ ಖಾಸಗಿ ಫೋಟೊಗಳನ್ನು ಹಂಚಿಕೊಂಡು ಮಾನಹಾನಿ ಮಾಡಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಎಚ್ಚರಿಕೆ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ, ಆಡಿಯೊ ದಾಖಲೆಗಳು ಹಾಗೂ ವೈಜ್ಞಾನಿಕ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಮಾಹಿತಿ ನೀಡಿದ ಅವರು, ಘಟನೆಯ ಸಂಪೂರ್ಣ ಸತ್ಯಾಂಶ ತಿಳಿಯದೆ ಕಳೆದ ಎರಡು […]
ಸಿಗರೇಟ್ ಸೇದುವವರ ಜೊತೆಗಿರುವ ಮಕ್ಕಳಿಗೂ ಕಾಡಲಿವೆ ಗಂಭೀರ ಸಮಸ್ಯೆಗಳು: ಮನೆಯ ಹೊರಗೆ ಸಿಗರೇಟ್ ಸೇದಿದರೂ ಉಳಿಯುತ್ತೆ ಈ ವಿಷಕಾರಿ ಅಂಶ

ಮಕ್ಕಳ ಆರೋಗ್ಯದ ಬಗ್ಗೆ ಪ್ರತಿಯೊಬ್ಬ ಪೋಷಕರಿಗೂ ಕಾಳಜಿ ಇರುತ್ತದೆ. ಉತ್ತಮ ಆಹಾರ, ಸ್ವಚ್ಛ ಪರಿಸರ ಹಾಗೂ ಕಾಯಿಲೆಗಳಿಂದ ರಕ್ಷಿಸಲು ಹಲವು ಮುನ್ನೆಚ್ಚರಿಕೆಗಳನ್ನು ವಹಿಸುತ್ತಾರೆ. ಆದರೆ ಮನೆಯಲ್ಲಿರುವ ಹಿರಿಯರ ಧೂಮಪಾನದ ಅಭ್ಯಾಸ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂಬುದನ್ನು ಹಲವರು ಗಮನಿಸುವುದಿಲ್ಲ. ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಕೆಲವರು ಮನೆಯೊಳಗೆ ಸಿಗರೇಟ್ ಸೇದುವುದಿಲ್ಲ. ಬದಲಾಗಿ ಬಾಲ್ಕನಿ, ಅಂಗಳ ಅಥವಾ ಕಿಟಕಿಯ ಬಳಿ ನಿಂತು ಧೂಮಪಾನ ಮಾಡುತ್ತಾರೆ. ಇದರಿಂದ ಮಕ್ಕಳು ಸಿಗರೇಟ್ ಹೊಗೆಯಿಂದ ಸುರಕ್ಷಿತವಾಗಿರುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಮನೆಯ […]