ತ್ರಿಶಾ ಕ್ಲಾಸಸ್ .ಸಿ.ಎ. ಇಂಟರ್ಮೀಡಿಯೇಟ್ ಸಾಧಕರಿಗೆ ತ್ರಿಶಾ ಸನ್ಮಾನ

ಕಟಪಾಡಿ: ತ್ರಿಶಾ ಕ್ಲಾಸಸ್ ವತಿಯಿಂದ ಸಿಎ (CA) ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಸಾಧನೆಗೈದ 45 ವಿದ್ಯಾರ್ಥಿಗಳಿಗೆ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮವು ಅಕ್ಟೋಬರ್ 31ರಂದು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನಡೆಯಿತು.ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್‌ಗಳಲ್ಲಿ ಉತ್ತೀರ್ಣರಾಗಿ ಅಖಿಲ ಭಾರತ ಮಟ್ಟದಲ್ಲಿ 35ನೇ ರ‍್ಯಾಂಕ್ ಪಡೆದ ಮಹಮ್ಮದ್ ರಿಝಾನ್ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಿಎ ವೃತ್ತಿಯ ಮಹತ್ವ, ಅದರಲ್ಲಿರುವ […]

ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆ : ಸೌಜನ್ಯಾ ಪೋಷಕರಿಗೆ ಎಸ್‌ಐಟಿ ಮುಖ್ಯಸ್ಥರಿಂದ ವಿಚಾರಣೆಗೆ ಬುಲಾವ್

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಎಸ್‌ಐಟಿಯ ನೂತನ ಮುಖ್ಯಸ್ಥರು ಸೌಜನ್ಯ ಅವರ ತಾಯಿ ಹಾಗೂ ಮಾವನಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸೌಜನ್ಯ ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಠೋಡ್ ನೇಮಕಗೊಂಡಿದ್ದು, ನವೆಂಬರ್ 2ರಿಂದ ಅವರು ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಚೇತನ್ ಸಿಂಗ್ ರಾಠೋಡ್ ಅವರು ಇಂದು ಬೆಳಿಗ್ಗೆ ಮಂಗಳೂರಿನ ಎಸ್‌ಐಟಿ ಕಚೇರಿಗೆ ಭೇಟಿ ನೀಡಲಿದ್ದಾರೆ. ಇದರ ಬೆನ್ನಲ್ಲೇ ಸೌಜನ್ಯ ಅವರ […]

ದೀಪಾವಳಿ ಹಬ್ಬಕ್ಕೆ ಉಡುಪಿಯ ಬಲ್ಲಾಳ್ ಮೊಬೈಲ್ಸ್ ವತಿಯಿಂದ ಬಂಪರ್ ಆಫರ್: ಹಬ್ಬದ ಸಂಭ್ರಮದಲ್ಲಿ ರೂ. 25 ಲಕ್ಷ ಗೆಲ್ಲುವ ಚಾನ್ಸ್!

ಉಡುಪಿ: ದೀಪಾವಳಿ ಹಬ್ಬ ಬಂದಿದೆ ಈ ಹಬ್ಬದ ಶಾಪಿಂಗ್‌ಗೆ ಉಡುಪಿಯ ಜನಪ್ರಿಯ ಮೊಬೈಲ್ ಶಾಪ್ ಬಲ್ಲಾಳ್ ಮೊಬೈಲ್ಸ್ ಬಂಪರ್ ಆಫರ್! ನೀಡಿದೆ. ಖರೀದಿಯೊಂದಿಗೆ ಬೈಕ್, ಐಫೋನ್, ಟಿವಿ ಸೇರಿದಂತೆ ₹25 ಲಕ್ಷಕ್ಕೂ ಅಧಿಕ ಮೌಲ್ಯದ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವನ್ನು ಉಡುಪಿಯ ಜನಪ್ರಿಯ ಬಲ್ಲಾಳ್ ಮೊಬೈಲ್ಸ್ ಸಂಸ್ಥೆ ಗ್ರಾಹಕರಿಗೆ ಒದಗಿಸಿದೆ. ಅಕ್ಟೋಬರ್ 10ರಿಂದ ಜನವರಿ 14ರವರೆಗೆ ನಡೆಯುವ ಈ ಅಭಿಯಾನದಲ್ಲಿ ಮೊಬೈಲ್ ಸೇರಿದಂತೆ ವಿವಿಧ ಉತ್ಪನ್ನಗಳ ಖರೀದಿಗೆ ಗ್ರಾಹಕರಿಗೆ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. 11 ಬೈಕ್‌ಗಳು, […]

ಉಡುಪಿ: ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ನವೀಕೃತ ಕಾರ್ಯಾಲಯ ಉದ್ಘಾಟನೆ

ಉಡುಪಿ: ಸಹಕಾರ ವ್ಯವಸ್ಥೆಯು ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಸಮಾಜದ ಬಡವರು, ಮಧ್ಯಮ ವರ್ಗದವರು, ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಆರ್ಥಿಕವಾಗಿ ಆಸರೆಯಾಗಿ ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.ಬ್ರಹ್ಮಗಿರಿಯ ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ನವೀಕೃತ ಕಾರ್ಯಾಲಯವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರ ವ್ಯವಸ್ಥೆ ಇಂದಿನದಲ್ಲ. ದೇಶದ ಸ್ವಾತಂತ್ರ್ಯಾನಂತರದಿಂದಲೇ ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಲಾಗಿದೆ. ದೇಶದ ಮೊದಲ ಪ್ರಧಾನಿ ಸಹಕಾರ ಚಳವಳಿಗೆ ಅಡಿಪಾಯ […]