ಕುಂದಾಪುರ: ಬಾಲಕಿ ಆತ್ಮಹತ್ಯೆ

ಕುಂದಾಪುರ: ಶಾಲೆಯ ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದ ವಿಚಾರ ಹಾಗೂ ಪೋಷಕರ ಸಭೆಗೆ ತಾಯಿ ಹಾಜರಾಗದ ಹಿನ್ನೆಲೆಯಲ್ಲಿ ಮನನೊಂದ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸ್ರೂರು ಗ್ರಾಮದಲ್ಲಿ ಅ.30ರ ಬೆಳಗ್ಗೆ ನಡೆದಿದೆ. ಬಸ್ರೂರು ಗ್ರಾಮದ ಫಾತಿಮಾ ಅಕ್ಸಾ (15) ಮೃತಪಟ್ಟ ಬಾಲಕಿ. ಈಕೆ ಬಸ್ರೂರು ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣ ಳಾಗಿದ್ದಳು. ಅ.30ರಂದು ಶಾಲೆಯಲ್ಲಿ ಪೋಷಕರ ಸಭೆ ನಿಗದಿಯಾಗಿತ್ತು. ಆದರೆ, ಬಾಲಕಿಯ […]
ಉಡುಪಿ: ಯುವಕ ಆತ್ಮಹತ್ಯೆ

ಉಡುಪಿ : ಉಡುಪಿ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ.30 ರಂದು ಸಂಜೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಹಿರಿಯಡ್ಕದ ಪೆರ್ಡೂರು ಪಾಡಿಗಾರ ನಿವಾಸಿ ಪ್ರದೀಪ್ ಪೂಜಾರಿ (28) ಎಂದು ತಿಳಿದು ಬಂದಿದೆ. ಈತ ಯುವತಿಯ ಮಾನಭಂಗಕ್ಕೆ ಯತ್ನಿಸಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗಿದ್ದ ಆರೋಪಿ ಎಂದು ತಿಳಿಯಲಾಗಿದೆ. ಗಾಯಗೊಂಡಿದ್ದ ಆರೋಪಿಯನ್ನು ಪೊಲೀಸರು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ಪೊಲೀಸರು ಸ್ಥಳಕ್ಕೆ […]