ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆ: ಮರಣೋತ್ತರ ಪರೀಕ್ಷೆ ನಡೆಸಿದ್ದ ಸಿಬ್ಬಂದಿಗೆ ಎಸ್ಐಟಿ ನೋಟಿಸ್

ಮಂಗಳೂರು: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ (ಪೋಸ್ಟ್ಮಾರ್ಟಂ) ನಡೆಸಿದ್ದ ಸಿಬ್ಬಂದಿಗೆ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಪ್ರಕರಣದ ಆರಂಭದಿಂದ ಅಂತಿಮ ಹಂತದವರೆಗೆ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಸಿಬ್ಬಂದಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಪ್ರಕರಣದಲ್ಲಿ ಆರಂಭಿಕ ಹಂತದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಮುಂದಾಗಿದ್ದಾರೆ. ಅಕ್ಟೋಬರ್ 30ರ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ. ಇದೇ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿ […]
ಮಲ್ಪೆಯಲ್ಲಿ ನಿರ್ಮಾಣಗೊಂಡ 6,300 ಟನ್ ಸಾಮರ್ಥ್ಯದ ಸರಕು ಹಡಗು ಲೋಕಾರ್ಪಣೆ

ಉಡುಪಿ: ಅಂತಾರಾಷ್ಟ್ರೀಯ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಮಲ್ಪೆಯ ಉಡುಪಿ ಕೊಚಿನ್ ಶಿಪ್ಯಾರ್ಡ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ನಾರ್ವೆಯ ವಿಲ್ಸನ್ ಎಎಸ್ಎ ಸಂಸ್ಥೆಗಾಗಿ ನಿರ್ಮಿಸುತ್ತಿರುವ 6,300 ಡೆಡ್ವೈಟ್ ಟನ್ ಸಾಮರ್ಥ್ಯದ ಎಂಟು ಒಣ ಸರಕು ಸಾಗಣೆ ಹಡಗುಗಳ ಪೈಕಿ ಮೊದಲ ಹಡಗನ್ನು ಲೋಕಾರ್ಪಣೆ ಮಾಡಲಾಗಿದೆ. ವಿಲ್ಸನ್ ಎಎಸ್ಎ ಅಧ್ಯಕ್ಷ ಐವಿಂದ್ ಐಡೆಸ್ವಿಕ್ ಹಾಗೂ ಅವರ ಪುತ್ರಿ ಅನ್ನಾ ಐಡೆಸ್ವಿಕ್ ಜಂಟಿಯಾಗಿ ಹಡಗನ್ನು ಲೋಕಾರ್ಪಣೆ ಮಾಡಿದರು. ಆಧುನಿಕ ತಂತ್ರಜ್ಞಾನ, ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ವಿನ್ಯಾಸಕ್ಕೆ […]
ಕ್ಯಾನ್ಸರ್ ಔಷಧಿಗಳ ಬೆಲೆ ಭಾರೀ ಕಡಿತ – 42 ಸಾವಿರದ ಟೊರೆಂಟ್ ಫಾರ್ಮಾ ಇಂಜೆಕ್ಷನ್ಗೆ 13 ಸಾವಿರ; ಹಿಂದೆ ಎಷ್ಟಿತ್ತು ಎಷ್ಟು ಇಳಿಕೆಯಾಗಿದೆ

ಅಹಮದಾಬಾದ್: ಕ್ಯಾನ್ಸರ್ ರೋಗಿಗಳಿಗೆ(Cancer Patients) ಚಿಕಿತ್ಸಾ ವೆಚ್ಚದ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಹೊರಡಿಸಿರುವ ಮಹತ್ವದ ಆದೇಶದ ಮೇರೆಗೆ, ಪ್ರಮುಖ ಔಷಧ ಸಂಸ್ಥೆ ಟೊರೆಂಟ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್(Torrent Pharmaceuticals Ltd) ತನ್ನ ಪ್ರಮುಖ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು (MRP) ಶೇ.70ರವರೆಗೂ ಗಣನೀಯವಾಗಿ ಇಳಿಕೆ ಮಾಡಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಪರಿಷ್ಕೃತ ನೂತನ ದರಗಳು ನವೆಂಬರ್ 9 ರಿಂದ ಜಾರಿಗೆ ಬರಲಿವೆ. ಈ ನಿಯಮ […]
ಖರ್ಗೆ ವರ್ತನೆ ಕಾಂಗ್ರೆಸ್ ಅಧಃಪತನಕ್ಕೆ ನಾಂದಿ: ಕುತ್ಯಾರು ನವೀನ್ ಶೆಟ್ಟಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಳಸಿರುವ ಆಕ್ಷೇಪಾರ್ಹ ಪದಪ್ರಯೋಗ ಖಂಡನೀಯ. ಖರ್ಗೆ ಅವರ ಬೇಜವಾಬ್ದಾರಿಯುತ ವರ್ತನೆ ಕಾಂಗ್ರೆಸ್ ಪಕ್ಷದ ಅಧಃಪತನಕ್ಕೆ ನಾಂದಿ ಹಾಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆರೋಪಿಸಿದ್ದಾರೆ. ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರ ಕುರಿತು ಖರ್ಗೆ ಅವರು ಬಳಸಿದ ಭಾಷೆ ಖಂಡನೀಯ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಓಲೈಸುವ ಉದ್ದೇಶದಿಂದ ಖರ್ಗೆ […]
Flight Service: ಗಲ್ಫ್ನಲ್ಲಿ ನೆಲೆಸಿರುವ ಕರಾವಳಿ ಜನರಿಗೆ ಭರ್ಜರಿ ಸಿಹಿ ಸುದ್ದಿ, ಈ ಹೊಸ ವಿಮಾನ ಸೇವೆಯಿಂದ ಸಮಯ ಮತ್ತು ಹಣ ಎರಡೂ ಉಳಿತಾಯ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇಯ ರಾಸ್ ಅಲ್ ಖೈಮಾಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ನೇರ ವಿಮಾನ ಸೇವೆ ಆರಂಭಗೊಂಡಿದೆ. ವಾರದಲ್ಲಿ ಎರಡು ದಿನ ಈ ವಿಮಾನ ಸಂಚರಿಸಲಿದೆ. ಮಂಗಳೂರು: ಯುಎಇ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಅರಸಿ ಹೋಗಿರುವ ಕರಾವಳಿ ಕನ್ನಡಿಗರಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಅತ್ಯಂತ ಸಂತಸದ ಸುದ್ದಿಯೊಂದನ್ನು ನೀಡಿದೆ! ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನ ಪ್ರಮುಖ ನಗರವಾದ ರಾಸ್ ಅಲ್ ಖೈಮಾಗೆ ನೇರ ವಿಮಾನ ಸೇವೆ ಅಧಿಕೃತವಾಗಿ ಆರಂಭಗೊಂಡಿದೆ. […]