ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ದಿಕ್ಕಾಪಾಲಾಗಿ ಓಡಿ ದಾಂಧಲೆ ಎಬ್ಬಿಸಿದ ಆನೆ: ಅಂಬಾರಿ ಜಾರಿ ಬಿದ್ದು ಹಾನಿ, ಜನರಲ್ಲಿ ಆತಂಕ

ಶಿವಮೊಗ್ಗ: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ 450 ಕೆಜಿ ತೂಕದ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದ ಸೋಮಣ್ಣ ಆನೆ ದಿಢೀರ್‌ ದಿಕ್ಕಾಪಾಲಾಗಿ ಓಡಿದ ಘಟನೆ ಆತಂಕ ಸೃಷ್ಟಿಸಿದೆ. ಆನೆಯ ಓಟದಿಂದ ಗಾಬರಿಗೊಂಡ ಜನರು ಸ್ಥಳದಿಂದ ಓಡಿಹೋಗಿದ್ದಾರೆ. ಈ ವೇಳೆ ಕಾರುಗಳಿಗೆ ಹಾನಿಯಾಗಿದ್ದು, ಅಂಬಾರಿಗೂ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ವರದಿಯಾಗಿದೆ. ನಗರದ ಶಿವಪ್ಪನಾಯಕ ಅರಮನೆಯಿಂದ ಜಂಬೂಸವಾರಿ ಆರಂಭವಾಗಿತ್ತು. ಸ್ವಲ್ಪ ದೂರ ಸಾಗುತ್ತಿದ್ದಂತೆ ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸೋಮಣ್ಣ ಆನೆ ಅಡ್ಡಾದಿಡ್ಡಿಯಾಗಿ ಓಡಿದೆ. ಇದರಿಂದ ಮೆರವಣಿಗೆಯಲ್ಲಿ ಆತಂಕದ […]

ಬಿಇಎಲ್‌ನಲ್ಲಿ ಉದ್ಯೋಗ ನೇಮಕಾತಿ:ಯಾರು ಅರ್ಜಿ ಸಲ್ಲಿಸಬಹುದು?

ಬೆಂಗಳೂರು: ಭಾರತದ ಪ್ರಮುಖ ರಕ್ಷಣಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳಲ್ಲಿ ಒಂದಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (BEL) ನಲ್ಲಿ ನಿರ್ದೇಶಕ (ಸಂಶೋಧನೆ ಮತ್ತು ಅಭಿವೃದ್ಧಿ) ಹುದ್ದೆಯ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಅನುಭವಿ ಎಂಜಿನಿಯರಿಂಗ್ ವೃತ್ತಿಪರರಿಗೆ ಇದು ಉದ್ಯೋಗಾವಕಾಶವಾಗಿದೆ. ಹುದ್ದೆಯ ವಿವರಗಳು ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಅಭ್ಯರ್ಥಿಗಳು ಎಂಜಿನಿಯರಿಂಗ್ ಪದವಿ ಹೊಂದಿರಬೇಕು. ಎಲೆಕ್ಟ್ರಾನಿಕ್ಸ್, ಸಂವಹನ, ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ಕ್ಷೇತ್ರಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. […]

ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಬೆನ್ನಲ್ಲೇ ಸಲ್ಮಾನ್ ಖಾನ್ ಗೂ ಈಗ ಜೀವ ಭಯ, ಭಾರೀ ಭದ್ರತೆಯಲ್ಲಿ ಸಲ್ಮಾನ್ ಖಾನ್ ಓಡಾಟ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ವರದಿಯಾಗಿದೆ. ದಾಳಿಯ ಘಟನೆ ನಡೆದ ಮೂರು ದಿನಗಳ ಬಳಿಕ ಮೊದಲ ಬಾರಿಗೆ ಮನೆಯಿಂದ ಹೊರಬಂದ ಸಲ್ಮಾನ್ ಖಾನ್, ಬಿಗಿ ಭದ್ರತೆಯೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಸಲ್ಮಾನ್ ಖಾನ್ ಅವರ ಅಂಗರಕ್ಷಕರು ಎಂಪಿ5 ಮತ್ತು ಎಸ್‌ಡಿ6 ಮಾದರಿಯ ಅತ್ಯಾಧುನಿಕ ಬಂದೂಕುಗಳನ್ನು ಹಿಡಿದಿರುವುದು ಕಂಡುಬಂದಿದೆ. ಅವರ ಪ್ರಮುಖ ಅಂಗರಕ್ಷಕ […]

ಅಣಬೆ ಅಂದ್ರೆ ಸುಮ್ಮನಲ್ಲ,ನಿಮ್ಮ ದೇಹಕ್ಕೆ ಬೇಕಾದ ಅದ್ಬುತ ಪ್ರೋಟಿನ್ ಫುಡ್ ಇದು,ಯಾವ ಅಣಬೆ ತಿಂದ್ರೆ ದೇಹಕ್ಕೆ ಹೆಚ್ಚು ಪೌಷ್ಟಿಕ?

ದೈನಂದಿನ ಆಹಾರದಲ್ಲಿ ಅಣಬೆಗಳನ್ನು ಸೇರಿಸುವುದರಿಂದ ದೇಹಕ್ಕೆ ಅಗತ್ಯವಾದ ನಾರಿನಂಶ, ಪ್ರೋಟೀನ್, ವಿಟಮಿನ್‌ಗಳು ಹಾಗೂ ಖನಿಜಾಂಶಗಳನ್ನು ಪಡೆಯಬಹುದು. ಕಡಿಮೆ ಕ್ಯಾಲೊರಿ ಮತ್ತು ವಿವಿಧ ಪೋಷಕಾಂಶಗಳನ್ನು ಹೊಂದಿರುವ ಅಣಬೆಗಳು ಸಮತೋಲಿತ ಆಹಾರದ ಉತ್ತಮ ಆಯ್ಕೆಯಾಗಿವೆ. ಅಣಬೆಗಳನ್ನು ಸಾಮಾನ್ಯವಾಗಿ ತರಕಾರಿಗಳಂತೆ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ ಇವು ಸಸ್ಯಗಳಲ್ಲ, ಶಿಲೀಂಧ್ರಗಳ ಗುಂಪಿಗೆ ಸೇರಿವೆ. ಆಯಿಸ್ಟರ್‌, ಲಯನ್ಸ್‌ ಮೇನ್‌, ಶಿಟಾಕೆ ಹಾಗೂ ಬಟನ್‌ ಅಣಬೆಗಳು ಜನಪ್ರಿಯವಾಗಿದ್ದು, ಪ್ರತಿಯೊಂದು ಪ್ರಭೇದವೂ ತನ್ನದೇ ಆದ ಪೌಷ್ಟಿಕ ಗುಣಲಕ್ಷಣಗಳನ್ನು ಹೊಂದಿದೆ. ಅಣಬೆಗಳಲ್ಲಿರುವ ನಾರಿನಂಶ, ಪ್ರೋಟೀನ್‌, ಉತ್ಕರ್ಷಣ ನಿರೋಧಕಗಳು ಹಾಗೂ […]

ಎಸ್‌ಬಿಐ ಗ್ರಾಹಕರ ಡೇಟಾ ಡಾರ್ಕ್‌ ವೆಬ್‌ನಲ್ಲಿ ಸೋರಿಕೆ: 3,897 ಮಂದಿಯ ವೈಯಕ್ತಿಕ ಮಾಹಿತಿ ಲೀಕ್

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಗ್ರಾಹಕರ ವೈಯಕ್ತಿಕ ಮಾಹಿತಿ ಡಾರ್ಕ್‌ ವೆಬ್‌ನಲ್ಲಿ ಸೋರಿಕೆಯಾಗಿರುವುದನ್ನು ಬ್ಯಾಂಕ್ ದೃಢಪಡಿಸಿದೆ. ಸುಮಾರು 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸೋರಿಕೆಯಾಗಿರುವ ಮಾಹಿತಿಯಲ್ಲಿ ಗ್ರಾಹಕರ ಹೆಸರು, ವಾಸಸ್ಥಳದ ವಿಳಾಸ, ಫೋನ್‌ ನಂಬರ್‌, ಜನ್ಮ ದಿನಾಂಕ, ಸಾಲ ಪಡೆಯಲು ಸಲ್ಲಿಸಿರುವ ಅಗತ್ಯ ದಾಖಲೆಗಳು ಹಾಗೂ ಪ್ರಮುಖ ಗುರುತಿನ ಚೀಟಿಗಳ ವಿವರಗಳು ಸೇರಿವೆ. ಡಾರ್ಕ್‌ ವೆಬ್‌ನಲ್ಲಿ ಪತ್ತೆಯಾದ ಸುಮಾರು 3.75 ಲಕ್ಷ ದಾಖಲೆಗಳ ಪ್ರಾಥಮಿಕ ಪರಿಶೀಲನೆಯ ಬಳಿಕ 3,897 ಗ್ರಾಹಕರ […]