ಉಡುಪಿ ಕೃಷ್ಣಮಠದಲ್ಲಿ ನವರಾತ್ರಿ ಪರ್ವಕಾಲದ ವ್ಯಾಸಪೂಜೆ ಆರಂಭ

ಉಡುಪಿ: ನವರಾತ್ರಿ ಪರ್ವಕಾಲದ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಶೀರೂರು ಮಠದ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ವ್ಯಾಸಪೂಜೆಯನ್ನು ನೆರವೇರಿಸಿದರು. ಶ್ರೀಕೃಷ್ಣ ಮಠದ ಚಂದ್ರಶಾಲೆಯಲ್ಲಿ ವಿಶೇಷವಾಗಿ ಅಲಂಕರಿಸಲಾದ ಚಿನ್ನದ ಮಂಟಪದ ಸ್ವರ್ಣಪೀಠದಲ್ಲಿ ಶ್ರೀ ವೇದವ್ಯಾಸ ದೇವರನ್ನು ಪ್ರತಿಷ್ಠಾಪಿಸಿ, ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಯಿತು. ಮಠದ ಸಂಪ್ರದಾಯ ಹಾಗೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನಡೆದ ಈ ಪೂಜೆಯಲ್ಲಿ ಶ್ರೀ ವೇದವ್ಯಾಸ ದೇವರಿಗೆ ವಿಶೇಷ ಆರಾಧನೆ ಸಲ್ಲಿಸಲಾಯಿತು. ಮೂರು ದಿನಗಳ ಕಾಲ ನಡೆಯುವ […]

ಮಾರ್ನೆಮಿ ವೇಷದಲ್ಲಿ ಜನಪದ ಸಂಸ್ಕೃತಿಯ ಅನಾವರಣ

ಉಡುಪಿ: ನವರಾತ್ರಿ ಸಂಭ್ರಮದ ನಡುವೆ ತುಳುನಾಡಿನ ಜನಪದ ಕಲೆ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಸಾರುವ ಮಾರ್ನೆಮಿ ವೇಷಗಳು ಗಮನ ಸೆಳೆಯುತ್ತಿವೆ. ಕಾರ್ಕಳದ ಬಜಗೋಳಿ ಹಾಗೂ ದಿಡಿಂಬಿರಿ ಗುಡ್ಡ ಪ್ರದೇಶದ ನಿವಾಸಿಗಳು ಕಾಡುಮನುಷ್ಯರ ವೇಷ ಧರಿಸಿ ಮನೆಮನೆಗೆ ತೆರಳಿ ಜನರನ್ನು ರಂಜಿಸುತ್ತಿದ್ದಾರೆ. ಸತೀಶ್, ಉಮೇಶ್, ವಿನಾಸ್ ಮತ್ತು ಗಗನ್ ಕಾಡುಮನುಷ್ಯರ ವೇಷ ಧರಿಸಿದರೆ, ಮೋಹನ್ ಸುವರ್ಣ ಅಜ್ಜಿಯ ವೇಷದಲ್ಲಿ ಗಮನ ಸೆಳೆಯುತ್ತಾರೆ. ಶಶಿಕಾಂತ್ ಕೊಳಲು ನುಡಿಸಿದರೆ, ಪ್ರಶಾಂತ್ ಮಾರ್ನಾಡ್ ಡೋಲು ಬಾರಿಸಿ ವೇಷಗಳಿಗೆ ಲಯದ ಮೆರಗು ನೀಡುತ್ತಾರೆ. […]

ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ.

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಮಣಿಪಾಲ ಮಹಿಳಾ ಸಮಾಜ, ಇನ್ನರ್ ವೀಲ್ ಮಣಿಪಾಲ ಮತ್ತು ಪವರ್ ಗ್ರೂಪ್ ಮಣಿಪಾಲದ ಸಹಯೋಗದೊಂದಿಗೆ ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಶುಕ್ರವಾರ ಸಂಜೆ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಟ್ಟಡವನ್ನು ಗುಲಾಬಿ ಬಣ್ಣದ ದೀಪಗಳಿಂದ ಬೆಳಗಿಸಿತು. ಸಂಜೆ 6:30ಕ್ಕೆ ನಡೆದ ಗುಲಾಬಿ ದೀಪಾಲಂಕಾರ ಸಮಾರಂಭದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮೆಡಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಅನಂತ್ ಪೈ, […]

ಕಾರಣವಿಲ್ಲದೇ ಮಹಿಳೆಯನ್ನ ರಾತ್ರಿಯಿಡೀ ಕಸ್ಟಡಿಯಲ್ಲಿಡಲು ಯಾವ ಅಧಿಕಾರವಿದೆ? – ಬಿಡುಗಡೆ ಬಳಿಕ ನೇಹಾ ಬೋರಾ ಪ್ರಶ್ನೆ

ನವದೆಹಲಿ: ದೇಶದಲ್ಲಿ ಕಾನೂನು ಸುವ್ಯವಸ್ಥೆ (Law and order) ಹದಗೆಟ್ಟಿದೆ. ಜನ ನೆಮ್ಮದಿಯ ನಿಟ್ಟುಸಿರುವ ಬಿಡಲೂ ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಸ್‌ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ (Neha Bora), ಕಾರಣವಿಲ್ಲದೇ ಮಹಿಳೆಯನ್ನ ರಾತ್ರಿಯಿಡೀ ಕಸ್ಟಡಿಯಲ್ಲಿಡಲು ಯಾವ ಅಧಿಕಾರವಿದೆ? ಎಂದು ಪ್ರಶ್ನೆ ಮಾಡಿದರು. ದೆಹಲಿ ಪೊಲೀಸರ ವಶದಿಂದ ಶನಿವಾರ (ಇಂದು) ಮುಂಜಾನೆ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೇಹಾ ಬೋರಾ, ಕೇಂದ್ರ ಸರ್ಕಾರದ (Central Government) ವಿರುದ್ಧ ವಾಗ್ದಾಳಿ ನಡೆಸಿದರು. ನನ್ನನ್ನ […]

ಮಕ್ಕಳೂ ಸೇರಿದಂತೆ ಪ್ರತಿಯೊಬ್ಬರಿಗೂ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ನವದೆಹಲಿ: ಇಂಟರ್ನೆಟ್‌ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಸಂವಿಧಾನದ ವಿಧಿ 21 ಮತ್ತು 19(1)(ಎ) ಅಡಿಯಲ್ಲಿ, ಇಂಟರ್ನೆಟ್‌ ಪ್ರವೇಶಿಸುವುದು ಮತ್ತು ಬಳಸುವುದು ಒಂದು ಮೂಲಭೂತ ಹಕ್ಕು ಎಂದು ಕೋರ್ಟ್‌ ಘೋಷಿಸಿದೆ. ಮಕ್ಕಳಿಗೂ ಇದೇ ಹಕ್ಕಿನ ರಕ್ಷಣೆ ಲಭ್ಯವಿದ್ದು,, ಅವರಿಂದ ಈ ಹಕ್ಕನ್ನ ಸಂಪೂರ್ಣವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. `ಸುರಕ್ಷತೆಯ ಹಿತದೃಷ್ಟಿಯಿಂದ ಮಕ್ಕಳನ್ನು ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ದೂರವಿಡಬೇಕೇ?ʼ ಎನ್ನುವ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. […]