ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಪ್ರಮುಖ: ಅಜಯ್ ಶೆಟ್ಟಿ

ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ಸ್ವತಂತ್ರತಾ ಭವನದಲ್ಲಿ ಅ. 3 ರಿಂದ 5 ರವರೆಗೆ ರಾಷ್ಟ್ರೀಯ ಯುವ ಸಂಸತ್ ಸಮಾರೋಪ ಸಮಾರಂಭ ನಡೆಯಿತು. ಉಡುಪಿ: ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ತಾಂತ್ರಿಕ ಪ್ರಗತಿ ಮತ್ತು ಕೌಶಲ್ಯಗಳೊಂದಿಗೆ ಸಂಸತಿ ಹಾಗೂ ನಾಗರಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ವಿಕಸಿತ ಭಾರತ&2047 ನಿಮಾರ್ಣಕ್ಕೆ ಕೊಡುಗೆ ನೀಡಬೇಕು ಎಂದು ಸಾಮಾಜಿಕ ಚಿಂತಕ, ಉಡುಪಿಯ ಉದ್ಯಮಿ ಅಜಯ್ ಪುರುಷೋತ್ತಮ ಶೆಟ್ಟಿ ತಿಳಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ಸ್ವತಂತ್ರತಾ ಭವನದಲ್ಲಿ ಅ. 3 […]
ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ₹5 ಕೋಟಿ ? ಏನಿದು ವಿವಾದ?

ನವದೆಹಲಿ: ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕಾಗಿ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ₹5 ಕೋಟಿ ನೀಡಲಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಆರೋಪವನ್ನು ಕೊಹ್ಲಿ ಅವರ ಅಧಿಕೃತ ವಕ್ತಾರರು ತಳ್ಳಿಹಾಕಿದ್ದಾರೆ. ಕೊಹ್ಲಿ ಅವರು ಪ್ರೇಮಾನಂದ ಮಹಾರಾಜ್ ಅವರ ಮೇಲಿನ ನಂಬಿಕೆ ಮತ್ತು ಗೌರವದಿಂದ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಯಾವುದೇ ಹಣದ ವ್ಯವಹಾರ ನಡೆದಿಲ್ಲ. ₹5 ಕೋಟಿ ನೀಡಲಾಗಿದೆ ಎಂಬ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಶ್ರೀ […]
ಉಡುಪಿ: ಎರಡು ಬೈಕ್‌ಗಳ ನಡುವೆ ಅಪಘಾತ – ಇಬ್ಬರು ಸವಾರರಿಗೆ ಗಾಯ

ಉಡುಪಿ: ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಸವಾರರು ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಕುಕ್ಕಿಕಟ್ಟೆ ಡಯಾನ–ಭಾಗ್ಯಮಂದಿರದ ಬಳಿ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ತಕ್ಷಣ ಧಾವಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳನ್ನು ಸಂಗಪ್ಪ ಮತ್ತು ನವೀನ ಎಂದು ಗುರುತಿಸಲಾಗಿದೆ. ಇವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಉಡುಪಿ ವಿಭಾಗದಲ್ಲಿ Postman & MTS ನೌಕರರಿಂದ ಧರಣಿ

ಉಡುಪಿ, ಅ.6: ರಾಷ್ಟ್ರೀಯ ಅಂಚೆ ವಲಯ ಸಂಘಟನೆ ಹಾಗೂ ಕೇಂದ್ರ ಸಂಘಟನೆಯ (Circle Union ಮತ್ತು CHQ) ಕರೆ ಮೇರೆಗೆ, ಉಡುಪಿ ವಿಭಾಗದ Postman ಹಾಗೂ MTS ನೌಕರರು ತಮ್ಮ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ (ಅ.6) ಕೆಲಸದ ಅವಧಿ ಮುಗಿದ ನಂತರ ಉಡುಪಿ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಶಾಂತಿಯುತವಾಗಿ ಧರಣಿ ಕಾರ್ಯಕ್ರಮ ನಡೆಸಿದರು. ಧರಣಿ ಕಾರ್ಯಕ್ರಮವುಸುಭಾಸ್ ತಿಂಗಳಾಯ, ವಿಭಾಗೀಯ ಕಾರ್ಯದರ್ಶಿ ಹಾಗೂ ವಲಯ ಸಹ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ನಡೆಯಿತು. ಈ […]
ಡಿಸೆಂಬರ್ 4 ರಿಂದ 13ರವರೆಗೆ 10 ದಿನಗಳ ಕಾಲ ರಾಜಧಾನಿಯಲ್ಲಿ ಸಂಭ್ರಮದ “ಬೆಂಗಳೂರು ಜಾತ್ರೆ”
ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆ ಎತ್ತಿಹಿಡಿಯಲು ರಾಜ್ಯ ಸರ್ಕಾರವು ಬೆಂಗಳೂರು ಜಾತ್ರೆಯನ್ನು ನಡೆಸಲಿದೆ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಬೆಂಗಳೂರು:ರಾಜಧಾನಿಯಾದ ಬೆಂಗಳೂರು ಮಹಾನಗರದಲ್ಲಿ ಇದೇ ಮೊದಲ ಬಾರಿಗೆ ಸಡಗರ ಸಂಭ್ರಮದ 10 ದಿನಗಳ “ಬೆಂಗಳೂರು ಜಾತ್ರೆ” ಈ ವರ್ಷದ ಕೊನೆಯ ತಿಂಗಳಲ್ಲಿ ಜರುಗಲಿದೆ. ನಗರದ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆ ಎತ್ತಿಹಿಡಿಯಲು ರಾಜ್ಯ ಸರ್ಕಾರವು ಬೆಂಗಳೂರು ಜಾತ್ರೆಯನ್ನು ಡಿಸೆಂಬರ್ 4 ರಿಂದ 13 ರವರೆಗೆ ನಡೆಸಲಿದೆ” ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ […]