ಮಲ್ಪೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಉಡುಪಿ: ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಿಗ್ಗೆ ಮಲ್ಪೆಯಲ್ಲಿ ನಡೆದಿದೆ.ಮೃತರನ್ನು ಆಂಧ್ರಪ್ರದೇಶದ ಪರಮೇಶ್ ಎಂದು ಗುರುತಿಸಲಾಗಿದೆ. ಗುಜರಿ ಹೆಕ್ಕುವ ಕೆಲಸ ಮಾಡುತ್ತಿದ್ದ ಪರಮೇಶ್, ತಾನು ಪ್ರತಿದಿನ ಮಲಗುವ ಜಾಗದಲ್ಲಿಯೇ ಕೊಲೆಯಾಗಿರುವುದು ಕಂಡುಬಂದಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

‘ರಾಮಾಯಣ’ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಖಡಕ್ ರಾವಣ ಲುಕ್, ಹೊಸ ಪೋಸ್ಟರ್ ನೋಡಿ ಥ್ರಿಲ್ಲಾದ ಅಭಿಮಾನಿಗಳು!

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಿರ್ವಹಿಸಿರುವ ರಾವಣನ ಪಾತ್ರದ ಮೊದಲ ಅಧಿಕೃತ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಯಶ್ ಅವರು ಲಂಕಾಧಿಪತಿ ರಾವಣನ ರಾಜಗಾಂಭೀರ್ಯ, ಶಕ್ತಿ ಹಾಗೂ ತೀವ್ರತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ರತ್ನಖಚಿತ ಚಿನ್ನದ ಕಿರೀಟ, ಮುತ್ತಿನ ಹಾರಗಳು ಹಾಗೂ ಭಾರವಾದ ಚಿನ್ನದ ಆಭರಣಗಳೊಂದಿಗೆ ಯಶ್ ಅವರ ಲುಕ್ ಗಮನ ಸೆಳೆಯುತ್ತಿದೆ. ಅವರ ಗಂಭೀರ ನೋಟ ಮತ್ತು ಪ್ರಭಾವಶಾಲಿ ವ್ಯಕ್ತಿತ್ವ ರಾವಣನ ಪಾತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು […]

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್,ನವರಾತ್ರಿ ಹಬ್ಬದ ವೇಳೆಗೆ ಖಾತೆಗೆ ಬೀಳಲಿದೆ 33ನೇ ಕಂತಿನ ಹಣ

ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಆರ್ಥಿಕ ಇಲಾಖೆ ಗ್ರೀನ್‌ ಸಿಗ್ನಲ್ ನೀಡಿದೆ. ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಗೆ ಸರ್ಕಾರ ಮುಂದಾಗಿರುವ ನಡುವೆಯೇ 33ನೇ ಕಂತಿನ ಹಣ ಬಿಡುಗಡೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದರೂ ಫಲಾನುಭವಿಗಳಿಗೆ ಹಣ ಜಮೆ ಮಾಡುವುದನ್ನು ತಡೆಯಬಾರದು ಎಂದು ಸಿಎಂ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ 33ನೇ ಕಂತಿನ ಹಣ ಬಿಡುಗಡೆಗೆ […]

ಬೆಳಕಿಗೆ ಮುತ್ತಿಗೆ ಹಾಕಿದ ಸಾವಿರಾರು ರೆಕ್ಕೆ ಗೆದ್ದಲುಗಳು

ಉಡುಪಿಯಲ್ಲಿ ಮಳೆ ಬಳಿಕ ಕಂಡುಬಂದ ‘ಟರ್ಮೈಟ್ ಸ್ವಾರ್ಮಿಂಗ್’ ದೃಶ್ಯ ಉಡುಪಿ: ನಗರದ ಗೀತಾಂಜಲಿ ಸಿಲ್ಕ್ಸ್ ರಸ್ತೆಯ ಅಂಗಡಿಗಳಲ್ಲಿ ಬೆಳಕಿಗೆ ಆಕರ್ಷಿತಗೊಂಡು ಸಾವಿರಾರು ರೆಕ್ಕೆ ಹೊಂದಿರುವ ಗೆದ್ದಲುಗಳು ಏಕಕಾಲದಲ್ಲಿ ಹಾರಾಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮುಂಗಟ್ಟುಗಳ ವಿದ್ಯುತ್ ದೀಪಗಳು ಹಾಗೂ ದಾರಿದೀಪಗಳಿಗೆ ಆಕರ್ಷಿತಗೊಂಡ ಗೆದ್ದಲುಗಳು ಗುಂಪು ಗುಂಪಾಗಿ ಹಾರಾಡುತ್ತಿದ್ದವು. ಕೆಲ ಸಮಯದ ಬಳಿಕ ರೆಕ್ಕೆಗಳನ್ನು ಕಳಚಿಕೊಂಡ ಗೆದ್ದಲುಗಳು ಹಾಗೂ ಉದುರಿದ ಸಾವಿರಾರು ರೆಕ್ಕೆಗಳು ದೀಪಗಳ ಕೆಳಗೆ ಹಾಗೂ ರಸ್ತೆಯಂಚಿನಲ್ಲಿ ಕಂಡುಬಂದವು. ಮಳೆ ಹಾಗೂ ತೇವಾಂಶದ […]

ತುಳು ಭಾಷಾ ಮಾನ್ಯತೆ ಸಂಭ್ರಮ: ಅ.4ರಂದು ಉಡುಪಿಯಲ್ಲಿ ‘ವಿಶೇಷ ತುಳುವೆರೆ ದಿಬ್ಬಣ’

ಉಡುಪಿ: ತುಳು ಭಾಷೆಗೆ ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ತುಳುಕೂಟ ಉಡುಪಿ ವತಿಯಿಂದ ಅ.4ರಂದು ನಗರದಲ್ಲಿ ‘ವಿಶೇಷ ತುಳುವೆರೆ ದಿಬ್ಬಣ’ ಹಾಗೂ ಗೌಜಿ-ಮಿನದನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 3 ಗಂಟೆಗೆ ಕುಂಜಿಬೆಟ್ಟು ರಿಕ್ಷಾ ನಿಲ್ದಾಣದಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದವರೆಗೆ ತುಳುಕೂಟದ ಸದಸ್ಯರು ಹಾಗೂ ವಿವಿಧ ತುಳು ಸಂಘಟನೆಗಳ ಸಹಯೋಗದಲ್ಲಿ ತುಳುವೆರೆ ದಿಬ್ಬಣ […]