ಪಂಚಮಿ ಸೌಹಾರ್ದ ಸಹಕಾರಿ ಸಂಘ ನಿಯಮಿತ; ವಾರ್ಷಿಕ ಸಭೆ

ಉಡುಪಿ: ಪಂಚಮಿ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಉಡುಪಿ ಇದರ 9ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸೆ.19 ರಂದು ಅಪರಾಹ್ನ 3.00 ಗಂಟೆಗೆ, ಕುಂಜಿಬೆಟ್ಟುವಿನ ಶಾರದಾ ಮಂಟಪದಲ್ಲಿ, ಸಂಘದ ಅಧ್ಯಕ್ಷರಾದ ಸತ್ಯಪ್ರಸಾದ್ ಶೆಣೈ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕೆ. ಹರೀಶ್ ಪ್ರಭು ಅವರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸ್ವಾತಿ ಅವರು ವಾರ್ಷಿಕ ವರದಿಯನ್ನು ಸಭೆಯಲ್ಲಿ ವಾಚಿಸಿದರು. ಸಭೆಯಲ್ಲಿ ನಿರ್ದೇಶಕರಾದ ಸಂಜೀವ ಪ್ರಭು, ಸುರೇಂದ್ರ ನಾಯಕ್, ರಾಘವೇಂದ್ರ ನಾಯಕ್, […]
ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಮಹಾಸಭೆ: ಸರಕಾರದ ಸಾಮಾಜಿಕ ಭದ್ರತಾ ಮಂಡಳಿಯ ಸೌಲಭ್ಯ ಬಳಸಿಕೊಳ್ಳಿ; ಅಲ್ತಾಫ್ ಅಹಮದ್

ಉಡುಪಿ: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಜಾರಿಗೊಳಿಸುತ್ತಿರುವ ವಿವಿಧ ಯೋಜನೆಗಳ ಜೊತೆಗೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಿ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್ ರವರು ಸಲಹೆ ನೀಡಿದರು. ಅವರು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘ ಉಡುಪಿ ಇವರು ಆಯೋಜಿಸಿರುವ ವರ‍್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಹಾಗು ರಿಕ್ಷಾ ಗ್ಯಾರೇಜುಗಳ ನೂತನ ದರಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡುತಿದ್ದರು. ಉಡುಪಿ […]